ಕಳ್ಳತನ

0
760

ಮೂಡುಬಿದಿರೆ ಪ್ರತಿನಿಧಿ ವರದಿ
ಮೂಡುಬಿದಿರೆ-ಗಂಟಲ್ ಕಟ್ಟೆಯಲ್ಲಿರುವ ಮನೆಯೊಂದರಲ್ಲಿ ಕಳೆದ ರಾತ್ರಿ ಕಳ್ಳರು ಕೈಚಳಕ ತೊರಿಸಿದ್ದಾರೆ. ಭೂಮಾಪಕ ಚಂದ್ರಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.
 
gantalkatte_robbery1
 
ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮನೆಯಲ್ಲಿದ್ದ 20ಸಾವಿರ ನಗದು ಹಾಗೂ 80 ಗ್ರಾಮ ಚಿನ್ನಾಭರಣಗಳನ್ನು ಕದ್ದೊಯ್ದು ಪರಾರಿಯಾಗಿದ್ದಾರೆ. ಕಳ್ಳರು ಹತ್ತಿರದ ಎರಡು ಮನೆಗಳಲ್ಲಿ ಇತ್ತೀಚೆಗೆ ಕಳ್ಳತನ ನಡೆಸಿದ್ದರು.
 
gantalkatte_robbery
 
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕಳ್ಳರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here