ಕಲ್ಲು ಮಾನವ

0
429

-ವಿನಾಯಕ ಭಟ್, ಬ್ರಹ್ಮೂರು
ಆತ ಎಲ್ಲಾ ಮಕ್ಕಳಂತೆ ಆಡಿ ನಲಿಯಬೇಕಿದ್ದ ಬಾಲಕ.. ನೂರಾರು ಕನಸುಗಳನ್ನು ಕಾಣಬೇಕಿದ್ದ ವಯಸ್ಸು.. ಆದ್ರೆ ವಿಚಿತ್ರ ಕಾಯಿಲೆಯೊಂದು ಆ ಬಾಲಕನ ಹಣೆಬರಹವನ್ನೇ ಬದಲಾಯಿಸ್ಬಿಡ್ತು. ಅಷ್ಟೇ ಅಲ್ಲ, ವೈದ್ಯಕೀಯ ಲೋಕವನ್ನೇ ತಬ್ಬಿಬ್ಬು ಮಾಡಿದಂತ ಪ್ರಕರಣ ಅದು. ಅಪರೂಪದಲ್ಲೇ ತೀರಾ ಅಪರೂಪ ಎನ್ನುವಂತ ರೋಗದಿಂದ ಬಳಲುತ್ತಿರುವ ಬಾಲಕನ ದುರಂತ ಬದುಕು ಹೇಗಿದೆ ಗೊತ್ತಾ? ಈ ಸ್ಟೋರಿ ನೋಡಿ.
 
kallumanava_vaarte1
ಚಿತ್ರ ವಿಚಿತ್ರವಾಗಿರುವ ಈ ಬಾಲಕನ ಸ್ಥಿತಿಯನ್ನ ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ. ವಿರೂಪಗೊಂಡಿರೋ ಮುಖ, ಕೆಟ್ಟದಾಗಿ ಪರಿವರ್ತನೆ ಹೊಂದಿರೋ ಚರ್ಮ, ಎಲ್ಲಾ ಅವಯವಗಳಲ್ಲೂ ಭಿನ್ನಗೊಂಡಿರುವ ಚರ್ಮದ ಸ್ಥಿತಿ, ನಿಮ್ಮನ್ನ ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತೆ.
 
ಇಡೀ ದೇಹವೇ ವಿರೂಪಗೊಂಡಿರುವ ಈ ಬಾಲಕನನ್ನ ನೇರ ದೃಷ್ಟಿಯಿಟ್ಟು ನೋಡೋಕೆ ಕೆಲವರಿಂದ ಸಾಧ್ಯ ಆಗ್ದೇ ಇರ್ಬಹುದು. ಇನ್ನೂ ಕೆಲವರಿಗೆ ಅಬ್ಬಾ, ಇದ್ಯಾವ ರೋಗ ಅಂತಾನೂ ಅನಿಸ್ಬಹುದು.. ಆದ್ರೆ ಈತನನ್ನ ಕಾಡ್ತಿರೋ ರೋಗದ ಬಗ್ಗೆ ಕೇಳಿದ್ರೆ ನೀವು ಅಚ್ಚರಿಪಡ್ತೀರಾ. ಯಾಕೆಂದ್ರೆ ಮನುಕುಲದಲ್ಲೇ ಇದು ತೀರಾ ಅಪರೂಪದ ಕಾಯಿಲೆ.
 
 
ಶಿಲೆಯಾಗಿ ಬದಲಾಗ್ತಿದ್ದಾನೆ ಬಾಲಕ..!
ಹಲವಾರು ಚರ್ಮವ್ಯಾಧಿಗಳ ಬಗ್ಗೆ ನೀವು ಕೇಳಿರ್ತೀರಾ. ಆದ್ರೆ ಈ ಬಾಲಕನನ್ನ ಅಂಟಿಕೊಂಡಿರೋ ವಿಚಿತ್ರ ರೋಗ ಮಾತ್ರ ಭಯಾನಕ. ಯಾಕೆಂದ್ರೆ ಈತ ಹಂತಹಂತವಾಗಿ ಕಲ್ಲಾಗಿ ಬದಲಾಗ್ತಿದ್ದಾನೆ. ಋಷಿಮುನಿಗಳ ಕಾಲದಲ್ಲಿ ಶಾಪಗ್ರಸ್ಥರು ಕಲ್ಲಾಗೋದನ್ನ ಕೇಳಿದ್ದೀವಿ. ಆದ್ರೆ ಈಗಿನ ಕಾಲದ ಮನುಷ್ಯ ಕಲ್ಲಾಗೋದು ಅಂದ್ರೆ ಅದೆಲ್ಲಿಯ ಮಾತು? ಅಂತ ಅನಿಸ್ಬಹುದು. ಆದ್ರೆ ನಂಬೋಕೆ ಅಸಾಧ್ಯವಾದಂತ ಸಂಗತಿಯಿದು. ಈ ಬಾಲಕನ ದೇಹ ಹಂತಹಂತವಾಗಿ ಕಲ್ಲಾಗಿ ಬದಲಾಗ್ತಿದೆ. ತೀರಾ ಅಪರೂಪದ ಕಾಯಿಲೆಯನ್ನ ನೋಡಿ ವೈದ್ಯಕೀಯ ಲೋಕವೂ ಬೆಕ್ಕಸ ಬೆರಗಾಗಿದೆ.
 
ಅಂದ ಹಾಗೆ ಈತನ ಹೆಸ್ರು ರಮೇಶ್..ನೇಪಾಳದ ಒಂದು ಪ್ರದೇಶದಲ್ಲಿ ಬಡಕುಟುಂಬದಲ್ಲಿ ಜನಿಸಿದ ಬಾಲಕ…. ಇನ್ನೂ ಕನಸುಗಳಿಗೆ ಬಣ್ಣ ತುಂಬುವ ವಯಸ್ಸು. ಕೇವಲ ಹನ್ನೊಂದನೇ ವರ್ಷದಲ್ಲಿಯೇ ಈ ಮಾರಣಾಂತಿಕ ಕಾಯಿಲೆಯೊಂದು ವಕ್ಕರಿಸಿಕೊಂಡುಬಿಟ್ಟಿದೆ ಪಾಪ. ದಿನೇ ದಿನೇ ಚಿತ್ರಹಿಂಸೆಯಿಂದ ನರಳ್ತಾ ಇರೋ ಈತನನ್ನ ನೋಡಿದ್ರೆ ಕರುಳು ಚುರ್ ಅಂದ್ಬಿಡತ್ತೆ.
 
 
ರಮೇಶ್​ಗೆ ಎಲ್ಲಾ ಮಕ್ಕಳಂತೆ ಆಟ ಆಡ್ಬೇಕು ಅನಿಸತ್ತೆ. ಸ್ನೇಹಿತರ ಜೊತೆ ಸ್ಕೂಲ್​ಗೆ ಹೋಗ್ಬೇಕು ಅನಿಸತ್ತೆ. ಮನೆಯಲ್ಲಿ ತುಂಟಾಟದಿಂದ ಎಲ್ರ ಜೊತೆ ಬೆರಿಬೇಕು ಅನಿಸತ್ತೆ. ಆದ್ರೆ ಈತನಿಂದ ಅದ್ಯಾವುದೂ ಸಾಧ್ಯವಿಲ್ಲ. ನಿತ್ಯ ಪರದಾಡುವ ಈತನ ಗೋಳು ಯಾರಿಗೂ ಬೇಡ. ಯಾವ ಕೆಲಸವನ್ನೂ ಮಾಡೋಕಾಗಲ್ಲ, ನಡೆದಾಡೋಕೆ ಕಾಲುಗಳು ಸಹಕರಿಸ್ತಿಲ್ಲ.
ಈತ ಈಗಾಗಲೇ ಅರ್ಧದಷ್ಟು ಶಿಲಾವಸ್ಥೆಗೆ ತಲುಪಿದ್ದಾನೆ. ಈತನನ್ನ ಕಂಡವರು ಭಯ ಪಡ್ತಾರೆ. ದೂರ ಓಡ್ತಾರೆ. ವಠಾರದ ಇತರ ಮಕ್ಕಳ ಜೊತೆ ಆಟವಾಡ್ಬೇಕು ಅಂತ ರಮೇಶ್​ಗೆ ಅನಿಸಿದ್ರೂ ಅವ್ರು ಹೆದರಿ ಓಡಿಬಿಡ್ತಾರೆ. ಹತ್ತಿರಕ್ಕೂ ಸೇರಿಸೋದಿಲ್ಲ. ಸಮಾಜವೇ ಈತನನ್ನ ತಿರಸ್ಕಾರ ಮಾಡಿದೆ. ಆದ್ರೆ ಇವನನ್ನ ಈಗಲೂ ಆರೈಕೆ ಮಾಡ್ತಿದ್ದಾರೆ ಅಂದ್ರೆ ಅದು ಹೆತ್ತವರು. ನಾನೇನು ತಪ್ಪು ಮಾಡಿದ್ದೀನಮ್ಮಾ? ನನಗ್ಯಾಕೆ ಈ ಶಿಕ್ಷೆ ಅಪ್ಪಾ? ಅನ್ನೋ ಮಗುವಿನ ವೇದನೆಗೆ ಅಪ್ಪಅಮ್ಮನಿಂದ ಪ್ರತಿಕ್ರಿಯೆ ಅಂದ್ರೆ ಕಂಬನಿಯೊಂದೇ.
 
 
ಅಚ್ಚರಿಯ ವಿಚಾರ ಏನಂದ್ರೆ ಈತ ಹುಟ್ಟಿದಾಗ ಸಹಜವಾಗಿಯೇ ಇದ್ದ. ಆರೋಗ್ಯ ಸ್ಥಿತಿ ಕೂಡ ನಾರ್ಮಲ್ ಆಗಿತ್ತು. ಆದ್ರೆ ಹುಟ್ಟಿದ 15 ನೇ ದಿನದಂದು ಈ ಕಾಯಿಲೆ ಚಿಗುರೊಡೆಯೋಕೆ ಶುರುವಾಗಿತ್ತು. ಮಗುವಿನ ಚರ್ಮ ಕಲ್ಲಿನಂತೆ ಅಲ್ಲಲ್ಲಿ ಒರಟಾಗೋಕೆ ಶುರುವಾಗಿತ್ತು. ಮಗು ಬೆಳಿತಿದ್ದಂತೆ ಚರ್ಮದ ಸ್ಥಿತಿ ಇನ್ನಷ್ಟು ಅಪಾಯಕಾರಿ ಹಂತಕ್ಕೆ ತಲುಪತೊಡಗಿತ್ತು. ನುರಿತ ವೈದ್ಯರ ಬಳಿ ಪರೀಕ್ಷಿಸಿದಾಗ ಮಗುವಿಗೆ ಇರೋ ಮಾರಕ ಕಾಯಿಲೆ ಏನು ಅನ್ನೋದು ಪತ್ತೆಯಾಗುತ್ತೆ.
 
ಇಚ್ತ್​ಯೋಸಿಸ್….ಯಸ್. ರಮೇಶ್​ನನ್ನ ಕಾಡ್ತಿರುವ ಭಯಾನಕ ಚರ್ಮರೋಗದ ಹೆಸ್ರು ಇಚ್ತ್​ಯೋಸಿಸ್. ಮನುಷ್ಯ ಕಲ್ಲಾಗಿ ಪರಿವರ್ತನೆಯಾಗುವ ಈ ಅಪರೂಪದ ಕಾಯಿಲೆ ನಿಜಕ್ಕೂ ಮನುಕುಲವನ್ನೇ ಬೆಚ್ಚಿಬೀಳಿಸುವಂತದ್ದು. ಆದ್ರೆ ಇಂತಹ ರೋಗಕ್ಕೆ ತುತ್ತಾದವ್ರು ಬೆಳಕಿಗೆ ಬಂದಿದ್ದು ಮಾತ್ರ ತೀರಾ ಅಪರೂಪ. ಈ ರೋಗಕ್ಕೆ ತುತ್ತಾದವರ ಚರ್ಮ ಏಳು ಪಟ್ಟು ವೇಗವಾಗಿ ಬೆಳೆಯತೊಡಗುತ್ತೆ. ಚರ್ಮದ ಕವಚ ಲೋಹಲೇಪವಾಗಿ ದಪ್ಪ ಪ್ಲೇಟ್​ಗಳಾಗಿ ಬದಲಾಗುತ್ತೆ. ಇದು ಇಡೀ ದೇಹವನ್ನ ಆವರಿಸಿಕೊಳ್ತಾ ಹೋಗುತ್ತೆ. ಇಂತಹ ಅಪಾಯಕಾರಿ ಸ್ಥಿತಿಯಿಂದ ವ್ಯಕ್ತಿಯನ್ನ ಹೊರತರೋದು ಸುಲಭವೇ ಅಲ್ಲ.
 
 
ಈ ಕಾಯಿಲೆಯ ಆರಂಭ ಹಂತದಲ್ಲಿ ರಮೇಶ್ ಒಂದು ಸ್ಟೇಜ್​ನಲ್ಲಿದ್ದ. ಆದ್ರೆ ಹಂತಹಂತವಾಗಿ ಚರ್ಮ ಕಲ್ಲಾಗುತ್ತಾ ಹೋಗುತ್ತೆ. ಅದು ಇಡೀ ದೇಹವನ್ನ ಆವರಿಸಿಕೊಳ್ಳತೊಡಗುತ್ತೆ. ದೇಹದ ಒಂದೊಂದೇ ಭಾಗಗಳು ದಪ್ಪ ಪ್ಲೇಟ್​ಗಳಾಗ್ತಿದ್ದಂತೆ ಈತ ಕುರೂಪಗೊಳ್ತಾನೆ. ದೇಹದ ಚರ್ಮ ಭಯಾನಕ ರೀತಿಯಲ್ಲಿ ಬದಲಾಗಿಬಿಡುತ್ತೆ.
5 ವರ್ಷ ದಾಟ್ತಾ ಇದ್ದಂತೆ ಈತ ನಡೆಯೋಕೂ ಸಾಧ್ಯವಾಗಲ್ಲ. ಕಾಲುಗಳು ಮಗುಚಿಕೊಂಡ ರೀತಿಗೆ ಬದಲಾಗುತ್ತೆ. ಕಲ್ಲಾದ ಕಾಲುಗಳನ್ನ ಹೊತ್ತು ಕೈಗಳ ಮೇಲೆ ಭಾರ ಹಾಕಿ ನಡೆಯೋದು ಚಿತ್ರಹಿಂಸೆ ನೀಡಿದಂತಾಗ್ತಿತ್ತು. ಎಲ್ಲರನ್ನ ನೋಡಿ ತಾನೂ ಅವರೊಂದಿಗೆ ಆಟವಾಡಬೇಕು ಅನ್ನೋ ಆಸೆ ಈ ಮುಗ್ಧ ಕಂಗಳಲ್ಲಿ ಕಂಡ್ರೂನು ತನ್ನಿಂದ ಏನೂ ಆಗ್ತಿಲ್ಲ ಅನ್ನೋ ಅಸಹಾಯಕತೆಯ ನೋವು ಇನ್ನೊಂದೆಡೆ.
ರೋಗದ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಚಿಕಿತ್ಸೆ ನೀಡೋಕಾಗತ್ತೆ ಅಂತ ವೈದ್ಯರೇನೋ ಹೇಳಿಬಿಡ್ತಾರೆ. ಆದ್ರೆ ಸಣ್ಣಪುಟ್ಟ ಖರ್ಚಿನಲ್ಲಿ ಈ ಚಿಕಿತ್ಸೆ ನಡೆಸೋದು ಸಾಧ್ಯವೇ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆಯಾಗ್ಬೇಕು. ರಮೇಶ್ ತಂದೆ ಕಾರ್ಮಿಕರಾಗಿ ಕೆಲ್ಸ ಮಾಡ್ತಿರೋದು. ತಿಂಗಳಿಗೆ 7000 ಸಂಬಳ ಪಡೆಯೋ ಇವ್ರಿಗೆ ಮಗನ ಚಿಕಿತ್ಸೆಗೆ ಹಣ ಹೊಂದಿಸೋದು ಕನಸಿನ ಮಾತಾಗಿತ್ತು. ಮಗನನ್ನ ಗುಣಪಡಿಸೋಕೆ ತನ್ನಿಂದ ಆಗ್ತಿಲ್ಲ, ಪಾಪ ಪ್ರಜ್ಞೆ ಕಾಡ್ತಿದೆ ಅಂತ ದುಃಖದಿಂದ್ಲೇ ಹೇಳಿಕೊಳ್ತಾರೆ.
 
 
ಈಗ ನೇಪಾಳದ ರಮೇಶ್ ಕಾಯಿಲೆ ಮತ್ತೊಂದು ಅಚ್ಚರಿಯನ್ನ ಹುಟ್ಟು ಹಾಕಿದೆ. ಈತ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿದ್ದಾನೆ. ದೇಹಕ್ಕೆ ದೇಹವೇ ತೀವ್ರ ನೋವಿಂದ ಬಳಲ್ತಿದೆ. ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣವಾಗ್ತಿದೆಯೇ ಹೊರತು ಕಡಿಮೆ ಆಗುವ ಸೂಚನೆ ಸಿಗ್ದಿರೋದನ್ನ ನೋಡಿ ಹೆತ್ತವರು ಇನ್ನಷ್ಟು ಗಾಬರಿಯಾಗಿದ್ದಾರೆ. ಆದ್ರೆ ಈ ನಡುವೆಯೇ ಇವರ ಸಹಾಯಕ್ಕೆ ಖ್ಯಾತ ನೇಪಾಳಿ ಸಿಂಗರ್ ಜಾಸ್ ಸ್ಟೋನ್ ಬಂದಿದ್ದಾರೆ. ರಮೇಶ್​ನನ್ನ ಭೇಟಿ ಮಾಡಿ ಕಾಯಿಲೆ ಬಗ್ಗೆ ವಿಚಾರಿಸಿದ್ದಾರೆ. ಇವನ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿರೋದ್ರಿಂದ ಫಂಡ್ ಕಲೆಕ್ಷನ್ ಕಾರ್ಯವೂ ನಡಿತಿದೆ. ಆನ್​ಲೈನ್ ಬಳಕೆದಾರರು ರಮೇಶ್ ನೆರವಿಗೆ ನಿಂತಿದ್ದಾರೆ.
ಭಯಾನಕ ಚರ್ಮರೋಗದಿಂದ ಬಳಲುತ್ತಿರೋ ನೇಪಾಳದ ಬಾಲಕ ಭಾರೀ ಸುದ್ಧಿಯಲ್ಲಿದ್ದಾನೆ. ಆತನ ವಿಚಿತ್ರ ಕಾಯಿಲೆ ಜಗತ್ತನ್ನೇ ಬೆರಗುಗೊಳಿಸಿದೆ. ಸಾವು ಬದುಕಿನ ನಡುವೆ ಹೋರಾಡ್ತಿರೋ ಬಾಲಕ ಮತ್ತೆ ಮೊದಲಿನಂತೆ ಆಗೋಕೆ ಸಾಧ್ಯಾನಾ? ಅಪರೂಪದ ಕಾಯಿಲೆಯಿಂದ ಆತನನ್ನ ಮುಕ್ತಿಗೊಳಿಸೋಕೆ ವೈದ್ಯಕೀಯ ರಂಗ ಯಶಸ್ವಿಯಾಗುತ್ತಾ? ಅನ್ನೋದು ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.

LEAVE A REPLY

Please enter your comment!
Please enter your name here