'ಕಲಾಮುಕುಲ' ಭರತನಾಟ್ಯ ಕಾರ್ಯಕ್ರಮ

0
306

 
ನಮ್ಮ ಪ್ರತಿನಿಧಿ ವರದಿ
ಶ್ರೀರಾಮಚಂದ್ರಾಪುರಮಠದ ‘ಕಲಾಮುಕುಲ’ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ,ಗಿರಿನಗರದ ಶ್ರೀರಾಮಾಶ್ರಮದಲ್ಲಿಂದು ಭರತನಾಟ್ಯ ಕಾರ್ಯಕ್ರಮ ಸಂಪನ್ನವಾಯಿತು.
 
 
ನಾಡಿನ ಪ್ರಸಿದ್ಧ ಭರತನಾಟ್ಯ ಗುರುಗಳಾದ ಕಿರಣ್ ಸುಬ್ರಹ್ಮಣ್ಯ ಹಾಗೂ ಸಂಧ್ಯಾ ಕಿರಣ್ ಅವರ ಶಿಷ್ಯೆಯಾದ ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ ಅವರಿಂದ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಶುಭಹಾರೈಸಿದರು. ನೂರಾರು ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
 
 
ಕಲಾಮುಕುಲ
ಮೊಗ್ಗಿನಂತೆ ಸುಪ್ತವಾಗಿರುವ ಕಲಾವಿದರಿಗೆ, ಭಾರತೀಯ ಕಲಾಪ್ರಕಾರಗಳಿಗೆ ವೇದಿಕೆಯಾಗುವುದು ‘ಕಲಾಮುಕುಲ’ದ ಉದ್ದೇಶವಾಗಿದ್ದು, ಉದಯೋನ್ಮುಖ ಕಲಾವಿದರಿಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿ ಸುಪ್ತ ಪ್ರತಿಭೆಗಳನ್ನು ಅನಾವರಣಗೋಳಿಸಿ, ಆಮೂಲಕ ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಶ್ರೀರಾಮಚಂದ್ರಾಪುರ ಮಠದ ‘ಕಲಾಮುಕುಲ’ ಸಾಂಸ್ಕೃತಿಕ ವೇದಿಕೆ ಮಾಡುತ್ತಿದ್ದು, ಈಗಾಗಲೇ ಅನೇಕ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
 
 
 
ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ
ಬಡಜ ನಾರಾಯಣ್ ಭಟ್ ಮತ್ತು ಸುಮಂಗಲಿ ಅವರ ಪುತ್ರಿ ಕು.ಶ್ರೀದೇವಿ ತನ್ನ ಆರನೇ ಎಳೆಯ ವಯಸ್ಸಿನಲ್ಲೇ ನಾಡಿನ ಹೆಸರಾಂತ ನೃತ್ಯ ದಂಪತಿಗಳಾದ ಗುರು ಕಿರಣ್ ಸುಬ್ರಮಣ್ಯಮ್ ಮತ್ತು ಸಂಧ್ಯಾ ಕಿರಣ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸವನ್ನ ಆರಂಭಿಸಿದಳು . ಇವಳ ಪ್ರತಿಭೆಯನ್ನು ಗುರುತಿಸಿ ಎಲ್ಲೆಡೆ ಪೂರ್ಣ ಅವಕಾಶಗಳು ಪಡೆಯುತ್ತಾ ಬಂದಳು . ಹಾಗಾಗಿಯೇ ಬಂಗಲೂರಿನ ಅಕ್ಷಯಪಾತ್ರೆ ಯೋಜನೆಯಲ್ಲಿ ಅವಳ ಗುರುಗಳು ನಿರ್ಮಿಸಿದ ಸರ್ವಂ ಕೃಷ್ಣಮಯಂ ರೂಪಕವು ಸೇರಿದಂತೆ ತನ್ನ ನೃತ್ಯ ಶಾಲೆ ರಸಿಕ ಆರ್ಟ್ಸ್ ಅಕಾಡೆಮಿಯ ರೂಪಕದಲ್ಲಿ ಪ್ರಮುಖ ಅವಕಾಶಗಳನ್ನ ಪಡೆಯುತ್ತಾ ಬಂದಳು.ಇವಳು ಜಯ ಟಿ.ವಿ ಯ ತಕಧಿಮಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ.
 
 
 
ಒಂದು ಅವಧಿಯಲ್ಲಿ ಶ್ರೀದೇವಿ ತನ್ನ ರಸಿಕ ಅಕಾಡೆಮಿಯ ವರ್ಷದ ಉತ್ತಮ ನರ್ತಕಿ ಪ್ರಶಸ್ತಿಯನ್ನ ಗಳಿಸಿಕೊಂಡಿದ್ದಳು. ಅದನ್ನ ಹೊರತು ಪಡಿಸಿದರೆ ತನ್ನ ಶಾಲಾ ಕಾಲೆಜಿನಲ್ಲಿ, ಜಿಲ್ಲಾ ಮಟ್ಟದಲ್ಲಿ ,ರಾಜ್ಯಾ ಮಟ್ಟದಲ್ಲಿ ಮತ್ತು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಮತ್ತು ಕೆಲವು ಪ್ರಶಸ್ತಿಗಳನ್ನ ಪಡೆದಿದ್ದಾಳೆ. ಜನವರಿ ೧೪ ೨೦೦೯ ರಂದು ದೈವ ಅನುಗ್ರಹದಿಂದ ಈಕೆ ತುಂಬಾ ಯಶಸ್ವಿಯಾಗಿ ತನ್ನ ರಂಗಪ್ರವೇಶವನ್ನು ಮುಗಿಸಿದ್ದಾಳೆ. ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಅಲ್ಲದೆ ಶೈಕ್ಷಣಿಕವಾಗಿಯೂ ಪ್ರತಿಭಾವoತಲಾದ ಶ್ರೀದೇವಿ ತನ್ನ ಶಾಲೆಯಿಂದ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಪಡೆದಿದ್ದಳು. ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ HP ಯಲ್ಲಿ ಉದ್ಯೋಗಿ ನಿರ್ವಹಿಸುತ್ತಿದ್ದಾಳೆ .

LEAVE A REPLY

Please enter your comment!
Please enter your name here