ಕಲಾಪ ಆರಂಭ: ಧರಣಿ ಮುಂದುವರಿಕೆ

0
285

ರಾಷ್ಟ್ರೀಯ ಪ್ರತಿನಿಧಿ ವರದಿ
ವಿಧಾನಸಭೆ ಕಲಾಪ ಆರಂಭವಾಗಿದೆ. ಮೊನ್ನೆಯ ಹಾಗೆ ಡೈರಿ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಪಕ್ಷ ಸದನದ ಬಾವಿಯಲ್ಲಿ ಧರಣಿ ಮುಂದುವರಿಸಿದ್ದಾರೆ. ಧರಣಿ ಹಿಂಪಡೆಯಲು ಸ್ಪೀಕರ್ ಕೆ.ಬಿ.ಕೋಳಿವಾಡ ಮನವಿ ಮಾಡಿದ್ದರು. ಸ್ಪೀಕರ್ ಮನವಿ ಮಾಡದರೂ ಕೇಳದೆ ಬಿಜೆಪಿಯವರು ಧರಣಿ ಮುಂದುವರಿಸಿದ್ದಾರೆ.
 
 
ಬಿಜೆಪಿ ವಿರುದ್ಧ ಗರಂ ಆದ ಸಿಎಂ
ವಿಧಾನಸಭೆಯಲ್ಲಿ ಧರಣಿ ನಿರತ ಬಿಜೆಪಿಯವರನ್ನು ಸಿಎಂ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಮಾನ, ಮರ್ಯಾದೆ ಇಲ್ಲ, ನಾಚಿಕೆಯೂ ಇಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ತೀವ್ರ ವಾಗ್ದಾಳಿ ಮಾಡಿದ್ದಾರೆ.
ರಾಜ್ಯವನ್ನು ಹಾಳು ಮಾಡಿದವರು, ಲೂಟಿಕೋರರು ನೀವು. ಭ್ರಷ್ಟಾಚಾರ ಮಾಡಿದವರು ನೀವು, ಕಲಾಪ ಹಾಳು ಮಾಡುತ್ತಿದ್ದೀರಿ…ವಿರೋಧ ಪಕ್ಷವಾಗಿ ಕೆಲಸ ಮಾಡಲು ನಿಮಗೆ ಗೊತ್ತಾಗುತ್ತಿಲ್ಲವೇ ಎಂದು ಬಿಜೆಪಿ ಸದಸ್ಯರಿಗೆ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here