ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ

0
426

ಉಡುಪಿ ಪ್ರತಿನಿಧಿ ವರದಿ
ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಧ್ವಜ ದಿನಾಚರಣೆ ಪ್ರೇರಣೆಯಾಗಲಿ
ಪೊಲೀಸರು ನೀಡುತ್ತಿರುವ ಸೇವೆಯನ್ನು ಉತ್ಸಾಹದಿಂದ, ಇನ್ನಷ್ಟು ಪ್ರಾಮಾಣಿಕವಾಗಿ ಹಾಗೂ ಸೇವಾ ಮನೋಭಾವನೆಯಿಂದ ನೀಡಲು ಪೊಲೀಸ್ ಧ್ವಜ ದಿನಾಚರಣೆ ಪ್ರೇರಕವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಹೇಳಿದ್ದಾರೆ.
 
ಅವರು ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿ ಕಾನೂನು ಪಾಲನೆಯಲ್ಲಿ ಸಕ್ರಿಯರಾಗಿರುವ ಪೊಲೀಸರಿಗೆ ಕರ್ನಾಟಕ ಪೊಲೀಸ್ ಕಾಯಿದೆ ಮತ್ತು ಇಂಡಿಯನ್ ಪಿನಲ್ ಕೋಡ್ ಬಹಳ ಮುಖ್ಯ; ಅದರಲ್ಲಿ ಕರ್ನಾಟಕ ಪೊಲೀಸ್ ಕಾಯಿದೆಯ 1965 ಏಪ್ರಿಲ್ 2ರಂದು ಜಾರಿಗೆ ತಂದಿತ್ತು. ಈ ದಿನವನ್ನು ಪೊಲೀಸ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
 
ಈ ವರ್ಷ ಜಿಲ್ಲೆಯಲ್ಲಿ 61 ಮಂದಿ ನಿವೃತ್ತರಾಗಿದ್ದಾರೆ. ಈ ವರ್ಷ 8.2 ಲಕ್ಷ ರೂ. ಅನುದಾನವನ್ನು ನಿವೃತ್ತರಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ನಿವೃತ್ತ ಪೊಲೀಸ್ ಅಧೀಕ್ಷಕ ಎಎನ್ಎಫ್ ಸಂತೋಷ್ ಕುಮಾರ್ ಅವರು, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಗೌರವವೆಂದು ಪರಿಗಣಿಸಿ, ನೆರವಿಗಾಗಿ ಬರುವ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಎಂದರು.
 
ಹಕ್ಕುಗಳ ಬಗ್ಗೆ ಸಮಾಜ ಜಾಗೃತವಾಗಿದ್ದು, ಕರ್ತವ್ಯ ನಿರ್ವಹಿಸುವ ವೇಳೆ ಕಾನೂನಿನ ಪರಿಮಿತಿಯೊಳಗೆ ಜನರಿಗೆ ನೆರವಾಗುವ ಕೆಲಸ ಮಾಡಿ; ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸರ್ಕಾರ ಹಲವು ಯೋಜನೆಗಳನ್ನು ನೀಡಿದ್ದು ಎಲ್ಲದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಜಿಲ್ಲೆಯ ಡಿವೈಎಸ್ಪಿ ಮಂಜುನಾಥ್ ಮತ್ತು ಜಿಲ್ಲಾ ನಿಯಂತ್ರಣ ವಿಭಾಗದ ನಿಸ್ತಂತು ವಿಭಾಗದ ಎಸ್ ಸಿ ಮೋಹನ್ ಅವರು ಇಂದು ಮುಖ್ಯಮಂತ್ರಿಗಳ ಪದಕ ಸ್ವೀಕರಿಸಿದರು.
 
ಆರ್.ಪಿ.ಐ ಡಿಎಆರ್ ಶೀನಾ ನಾಯ್ಕ್ ನೇತೃತ್ವದಲ್ಲಿ ಕವಾಯತು ನಡೆಯಿತು. ನಿವೃತ್ತರಿಗೆ ಕಲ್ಯಾಣ ನಿಧಿ ವಿತರಿಸಲಾಯಿತು. ಪೊಲೀಸ್ ಧವಜ ಅನಾವರಣಗೊಳಿಸಲಾಯಿತು. ಡಿವೈಎಸ್ಪಿ ಕುಮಾರಸ್ವಾಮಿ ವಂದಿಸಿದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಎಸ್ ಐ ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here