ಕರ್ನಾಟಕದ ಸಹಾಯಕ್ಕೆ ಬಂದ ಕೇಂದ್ರ

0
413

ರಾಷ್ಟ್ರೀಯ ಪ್ರತಿನಿಧಿ ವರದಿ
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತವಾಗಿದೆ. ಆದೇಶ ಮರುಪರಿಶೀಲಿಸಲು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿರಿಂದ ಅರ್ಜಿ ಸಲ್ಲಿಕೆಯಾಗಿದೆ.
 
ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶಿಸುವಂತಿಲ್ಲ. ಶಾಸನ ರಚನೆ ಸಂಸತ್ತಿನ ಜವಾಬ್ದಾರಿಯಾಗಿದೆ ಎಂದು ಅಟಾರ್ನಿ ಜನರಲ್ ಹೇಳಿದೆ. ಎಜಿ ಸಲ್ಲಿಸಿರುವ ಅರ್ಜಿ ನಾಳೆಗೆ ವಿಚಾರಣೆ ನಿಗದಿಯಾಗಿದೆ.
 
 
 
ಕೃಷ್ಣಾ ನದಿ ನೀರು ಹಂಚಿಕೆ ವಿವಾದದಲ್ಲಿ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶಿಸುವಂತಿಲ್ಲ. ಶಾಸನ ರಚನೆ ಸಂಸತ್ತಿನ ಜವಾಬ್ದಾರಿಯಾಗಿದೆ ಸುಪ್ರೀಂ ಕೋರ್ಟ್ ಹೇಳಿತ್ತು. ಆದೇಶ ಮರುಪಿಶೀಲಿಸಲು ಕೋರ್ಟ್ ಮನವಿ ಮಾಡಿತ್ತು. ಕೇಂದ್ರ ಸರ್ಕಾರ ಆದೇಶ ಮರುಶೀಲನೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್ ನೀರು ಬಿಡುಗಡೆ ಬಗ್ಗೆ ವಿವರ ಕೇಳಿದೆ. ಇದೇ ವೇಳೆ ನೀರು ಬಿಡುಗಡೆ ಪ್ರಗತಿ ಹೇಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿಗೆ ಕೋರ್ಟ್ ಪ್ರಶ್ನೆ ಹಾಕಿದೆ. ಇದರಿಂದ ಸುಪ್ರೀಂಕೋರ್ಟ್ ನಾಳೆ ವಿಚಾರಣೆ ನಡೆಸಲು ನಿಗದಿಪಡಿಸಿದೆ.
 
 
ಕೇಂದ್ರದ ಅಫಿಡವಿಟ್ ಗೆ ತಮಿಳುನಾಡು ವಿರೋಧ
ಕಾವೇರಿ ವಿಚಾರವಾಗಿ ಕರ್ನಾಟಕದ ಪರ ಆಶಾದಾಯಕವಾಗಿರುವ ಕೇಂದ್ರ ಸರ್ಕಾರದ ಅಫಿಡವಿಟ್ ಗೆ ತಮಿಳುನಾಡು ಭಾರಿ ವಿರೋಧ ವ್ಯಕ್ತಪಡಿಸಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ಅನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ.

LEAVE A REPLY

Please enter your comment!
Please enter your name here