ಕರ್ನಾಟಕದಲ್ಲಿ 'ಪ್ರವಾಸಿ ಭಾರತೀಯ ದಿವಸ್'

0
288

ಬೆಂಗಳೂರು/ನವದೆಹಲಿ ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ 14ನೇ ‘ಪ್ರವಾಸಿ ಭಾರತೀಯ ದಿವಸ್’ ಆಚರಣೆ ನಿಗದಿಯಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಿಷ್ಮಾ ಸ್ವರಾಜ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
 
 
ದೆಹಲಿ ಜವಾಹರ್ ಲಾಲ್ ನೆಹರೂ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಆರ್ ವಿ ದೇಶ ಪಾಂಡೆ, ಅಪ್ಪಾಜಿ ಗೌಡ ಉಪಸ್ಥಿತರಿದ್ದರು.
 
ಎಲ್ಲರಿಗೂ ಸಮಸ್ಕಾರ ಎಂದು ಸಿಎಂ ಸಿದ್ದರಾಮಯ್ಯ ಮಾತು ಆರಂಭಿಸಿದ್ದಾರೆ. ಇದೇ ಮೊದಲ ಭಾರಿಗೆ ಕರ್ನಾಟಕದಲ್ಲಿ ಪ್ರವಾಸಿ ದಿವಸ್ ಆಚರಣೆಯಾಗಲಿದೆ. 2017 ಜನವರಿ 7, 8 ಮತ್ತು 9ಕ್ಕೆ ಪ್ರವಾಸಿ ಭಾರತೀಯ ದಿವಸ್ ಆಚರಣೆ ನಡೆಯಲಿದೆ. ವಿಷಯ ಅನೌನ್ಸ್ ಮಾಡಲು ಅತೀವ ಸಂತಸವಾಗುತ್ತಿದೆ. ಭಾರತೀಯ ದಿವಸ್ ಅನ್ನು ಅವಿಸ್ಮರಣಿಯವಾಗಿಸುತ್ತೇವೆ. ವಿವಿಧ ದೇಶಗಳಲ್ಲಿ 25 ಮಿಲಿಯನ್ ಭಾರತೀಯರು ವಾಸವಾಗಿದ್ದಾರೆ. ಕರ್ನಾಟಕ ವಿಸ್ತೀರ್ಣದಲ್ಲಿ ಭಾರತದ 7ನೇ ದೊಡ್ಡ ರಾಜ್ಯವಾಗಿದೆ. ಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ 8ನೇ ಸ್ಥಾನದಲ್ಲಿದೆ. ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
 
 
ಇನ್ಫೋಸಿಸ್, ವಿಪ್ರೋ ಸೇರಿ ಇತರರು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಕೈಗಾರಿಕೆಯಲ್ಲಿ ಕರ್ನಾಟಕದ ಹೆಸರು ಕಾಣುವಂತೆ ಮಾಡಿದೆ. ನಾವು ಯಶಸ್ವಿ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದೇವು. ಕರ್ನಾಟಕಕ್ಕೆ 68 ಸಾವಿರ ಕೋಟಿ ರೂ.ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಇದರಲ್ಲಿ ಈ ವರ್ಷ ಮೊದಲ 6 ತಿಂಗಳಲ್ಲೇ ಅಪಾರ ಬಂಡವಾಳ ಹೂಡಿಕೆಯಾಗಿದೆ ಎಂದು ಸಿಎಂ ಸುದ್ದಿಗೊಷ್ಠಿಯಲ್ಲಿ ವಿವರಿಸಿದ್ದಾರೆ.
 
 
ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನವಿದೆ. ಬೆಂಗಳೂರಿನಲ್ಲಿ 19 ದೇಶಗಳು ಪ್ರತಿನಿಧಿಗಳನ್ನು ನೇಮಿಸಿದೆ. ವಿದೇಶಾಂಗ ಇಲಾಖೆ ಜತೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಪ್ರವಾಸಿ ಭಾರತೀಯ ದಿವಸ್ ಯಶಸ್ವಿಯಾಗಲು ಕೆಲಸ ಆಗಬೇಕಿದೆ. ಪ್ರವಾಸಿ ಭಾರತೀಯ ದಿವಸ್ ಗೆ ಅತಿಥಿಗಳಿಗೆ ಮುಕ್ತಾ ಆಹ್ವಾನ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಪ್ರವಾಸಿ ‘ಭಾರತೀಯ ದಿವಸ್’ ನ ಲೋಗೋ ಬಿಡುಗಡೆ ಮಾಡಿದ್ದು, ಪ್ರತಿನಿಧಿಗಳ ರಿಜಿಸ್ಟ್ರೇಷನ್ ಪೋರ್ಟಲ್ ಗೂ ಸಿಎಂ ಚಾಲನೆ ನೀಡಿದ್ದಾರೆ.
 
 
ಎನ್ ಆರ್ ಐ ಗಳ ಸಲಹೆಗಳನ್ನು ಸ್ವೀಕರಿಸುತ್ತೇವೆ: ಸ್ವರಾಜ್
ಜನವರಿ 9ರಂದು ಪ್ರವಾಸಿ ಭಾರತೀಯ ದಿವಸ್ ಆಗಿದ್ದು, ಈ ಬಾರಿ ಬೆಂಗಳೂರು ನಗರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ಪ್ರವಾಸಿ ‘ಭಾರತೀಯ ದಿವಸ್’ ನ ಲೋಗೋ ಬಿಡುಗಡೆ ಮಾಡಿದ್ದು, ಇಂದಿನಿಂದಲೇ ರಿಜಿಸ್ಟ್ರೇಶನ್ ಆರಂಭವಾಗಲಿದೆ. ಭಾರತೀಯರ ನೋಂದಣಿಗೆ 100 ಡಾಲರ್ ಶುಲ್ಕವಿದ್ದು, ವಿದೇಶಿಯರ ನೋಂದಣಿಗೆ 150 ಡಾಲರ್ ಶುಲ್ಕವಿದೆ. ಜನವರಿ 9ರಂದು ಮಹಾತ್ಮಾ ಗಾಂಧಿ ಭಾರತಕ್ಕೆ ಮರಳಿದ ದಿನವಾಗಿದೆ. ಹೀಗಾಗಿ ಪ್ರತಿವರ್ಷ ಅಂದೇ ಪ್ರವಾಸಿ ಭಾರತ್ ದಿವಸ್ ಆಚರಸಿಲಾಗುತ್ತದೆ. ಅಂದು ಅನಿವಾಸಿ ಭಾರತೀಯರ ಜತೆ ಸರ್ಕಾರ ಚರ್ಚೆ ನಡೆಸಲಿದೆ. ಚರ್ಚೆ ವೇಳೆ ಎನ್ ಆರ್ ಐ ಗಳ ಸಲಹೆಗಳನ್ನು ಸ್ವೀಕರಿಸುತ್ತೇವೆ. ಈ ಸಲಹೆ ಪರಿಗಣಿಸಿ ಪ್ರಮುಖ ತೀರ್ಮಾನ ಕೈಗೊಳ್ಳುತ್ತೇವೆ ಎಂದು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here