ಕರೆಂಟ್ ಶಾಕ್…

0
200

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದ ನಾಗರಿಕರಿಗೆ ವಿದ್ಯುತ್ ದರ ಏರಿಕೆಯ ಶಾಕ್ ತಟ್ಟಿದೆ. ದಿನ್ 24 ಗಂಟೆ ವಿದ್ಯುತ್ ಕೊಡಿ ಎಂದು ಕೇಳಿದರೆ ರಾಜ್ಯ ಸರ್ಕಾರ ಜನತೆಗೆ ಶಾಕ್ ಕೊಟ್ಟಿದೆ. ಸರಿಯಾಗಿ ಕರೆಂಟ್ ನೀಡದೆ ವಿದ್ಯುತ್ ದರವನ್ನು ಏರಿಕೆ ಮಾಡಿದೆ. ಬೇಸಿಗೆಯಲ್ಲಿ ರಾಜ್ಯದ ಜನತೆಗೆ ಸಿದ್ದು ಸರ್ಕಾರ ಬಿಸಿ ಬರೆ ಎಳೆದಿದೆ. ಇದರಿಂದ ಸಿದ್ದು ಸರ್ಕಾರದ ಹಲವು ಭಾಗ್ಯಗಳ ಜೊತೆಗೆ ವಿದ್ಯುತ್ ದರ ಹೆಚ್ಚಳ ‘ಭಾಗ್ಯ’ ವೂ ಜಾರಿಗೆ ಬಂದಿದೆ.
ರಾಜ್ಯದ ಎಲ್ಲ ವಿದ್ಯುತ್ ನಿಗಮ ವ್ಯಾಪ್ತಿಯಲ್ಲೂ ದರ ಹೆಚ್ಚಳವಾಗಿದೆ. 2016-17ನೇ ಸಾಲಿಗೆ ಅನ್ವಯವಾಗುವಂತೆ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ನೂತನ ವಿದ್ಯುತ್ ದರ ಜಾರಿಯಾಗಲಿದೆ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದೆ.
 
ನಗರ ಪ್ರದೇಶದಲ್ಲಿ ಪರಿಷ್ಕೃತ ವಿದ್ಯುತ್ ದರ ಈ ರೀತಿಯಿದೆ.
ಗೃಹ ಬಳಕೆ ವಿದ್ಯುತ್ ಗೆ 30 ಯೂನಿಟ್ ವರೆಗೆ ರೂ.3, 31-100 ಯೂನಿಟ್ ವರೆಗೆ 1 ಯೂನಿಟ್ ಗೆ ರೂ.4.40, 101-200 ಯೂನಿಟ್ ವರೆಗೆ 1 ಯೂನಿಟ್ ಗೆ ರೂ.5.90, 200 ಯೂನಿಟ್ ಮೀರಿದ್ರೆ 1 ಯೂನಿಟ್ ಗೆ 6.90 ಆಗಿದೆ.
ಗ್ರಾಮೀಣ ಪ್ರದೇಶದಲ್ಲಿ ಪರಿಷ್ಕೃತ ವಿದ್ಯುತ್ ದರ ಈ ರೀತಿಯಿದೆ.
ಗೃಹ ಬಳಕೆಗೆ ವಿದ್ಯುತ್ ಗೆ 30 ಯೂನಿಟ್ ವರೆಗೆ ರೂ.2.90, 31-100 ಯೂನಿಟ್ ವರೆಗೆ 1 ಯೂನಿಟ್ ಗೆ ರೂ.4.10, 101-200 ಯೂನಿಟ್ ವರೆಗೆ 1 ಯೂನಿಟ್ ಗೆ ರೂ.5.60, 200 ಯೂನಿಟ್ ಮೀರಿದ್ರೆ 1 ಯೂನಿಟ್ ಗೆ ರೂ. 6.40 ಆಗಿದೆ.
ಕೈಗಾರಿಕಾ ಬಳಕೆಗೆ ಪರಿಷ್ಕೃತ ವಿದ್ಯುತ್ ದರ ಈ ರೀತಿಯಿದೆ.
ಕೈಗಾರಿಕಾ ಬಳಕೆಗೆ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಬಳಕೆಗೆ ಪ್ರತಿ ಯೂನಿಟ್ ಗೆ 20 ಪೈಸೆ ಹೆಚ್ಚಳ ಮಾಡಲಾಗಿದೆ. ಕುಡಿಯುವ ನೀರು, ಬೀದಿ ದೀಪಕ್ಕೆ ರೂ.3.90 ಆಗಿದೆ.
ಈ ಬಗ್ಗೆ ಆಯೋಗ ಅಧ್ಯಕ್ಷ ಎಂ ಕೆ ಶಂಕರಲಿಂಗೇಗೌಡ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here