ಕರೀಷ್ಮಾ-ಸಂಜಯ್ ದಾಂಪತ್ಯ ಅಂತ್ಯ

0
533

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಹಾಗೂ ಉದ್ಯಮಿ ಸಂಜಯ್ ಕಪೂರ್ ಅವರು ದಾಂಪತ್ಯ ಜೀವನ ಕೊನೆಗೂ ಅಂತ್ಯವಾಗಿದೆ. ಬಾಲಿವುಡ್ ನಟಿ ಕರಿಷ್ಮಾ ಕಪೂರ್ ದಂಪತಿ ವಿಚ್ಛೇದನ ಮಂಜೂರಾಗಿದೆ.
 
 
ವಿಚ್ಛೇದನ ಅನುಮೋದಿಸಿ ಮುಂಬೈ ಕುಟುಂಬ ನ್ಯಾಯಾಲಯ ದಂಪತಿಗಳು ಸಲ್ಲಿಸಿದ ಸಮ್ಮತಿಯ ಷರತ್ತುಗಳನ್ನು ಅಂಗೀಕರಿಸಿ ನಿನ್ನೆ ತೀರ್ಪು ನೀಡಿದೆ.
 
 
 
2014ರಲ್ಲಿ ಕೌಟುಂಬಿಕ ಇವರಿಬ್ಬರ ನಡುವೆ ಸಮರಸ ಸಾಧ್ಯವಾಗದೇ ಇದ್ದುದರಿಂದ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಇಬ್ಬರಿಗೂ ಡೈವೋರ್ಸ್ ಸಿಕ್ಕಿರಲಿಲ್ಲ. ಇದೇ ವಿಚಾರ ಇಬ್ಬರ ನಡುವೆ ಇನ್ನಷ್ಟು ವೈಮನಸ್ಸಿಗೆ ಕಾರಣವಾಗಿತ್ತು. ಆದ್ರೀಗ ದಂಪತಿ ಕೊನೆಗೂ ಕಾನೂನಾತ್ಮಕವಾಗಿ ದೂರವಾಗಿದ್ದಾರೆ.
 
 
 
2003ರಲ್ಲಿ ಕರೀಷ್ಮಾ ಹಾಗೂ ಸಂಜಯ್ ಕಪೂರ್ ಅವರು ಪ್ರೀತಿಸಿ ವಿವಾಹಾಗಿದ್ದರು. 2010ರಲ್ಲಿ ಇವರಿಬ್ಬರ ನಡುವೆ ಮೈಮನಸ್ಸು ಮೂಡಿ ಕರೀಷ್ಮಾ ಸಂಜಯ್ ಅವರಿಂದ ದೂರವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ 13 ವರ್ಷಗಳ ದಾಂಪತ್ಯ ಜೀವನ ಡೈವೋರ್ಸ್ ಮೂಲಕ ಕೊನೆಗೊಂಡಿದೆ.

LEAVE A REPLY

Please enter your comment!
Please enter your name here