ಕರಿಬೇವಿನ ಚಟ್ನಿ

0
650

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ: 

ಕರಿಬೇವಿನ ಎಲೆಗಳು 2ಲೋಟ, ಒಣಮೆಣಸು 3–4, ತೊಗರಿಬೇಳೆ 2 ಚಮಚ, ತೆಂಗಿನ ತುರಿ 1ಲೋಟ, ಹುಳಿ ಹುಣಸೆ ಬೀಜ ಗಾತ್ರ, ತುಪ್ಪ 1 ಚಮಚ, ಬೆಳ್ಳುಳ್ಳಿ 4 ಎಸಳು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: 

ಕರಿಬೇವಿನ ಸೊಪ್ಪನ್ನು ಎಣ್ಣೆಯಲ್ಲಿ ಚೆನ್ನಾಗಿ ಬಾಡಿಸಿ. ಒಣಮೆಣಸು, ತೊಗರಿಬೇಳೆಯನ್ನು ಹುರಿಯಿರಿ. ಬಾಡಿಸಿದ ಕರಿಬೇವಿನ ಸೊಪ್ಪಿಗೆ ತೆಂಗಿನ ತುರಿ, ಹುರಿದ ತೊಗರಿಬೇಳೆ, ಒಣಮೆಣಸು, ಹುಳಿ, ಉಪ್ಪು ಸೇರಿಸಿ ರುಬ್ಬಿ. ತುಪ್ಪದಲ್ಲಿ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಮಾಡಿ. ಇದು ಊಟಕ್ಕೆ, ಚಪಾತಿ, ದೋಸೆ ಜೊತೆಗೆ ಚೆನ್ನಾಗಿರುತ್ತದೆ. ಸ್ಥೂಲಕಾಯದವರು ಕೆಲ ತಿಂಗಳವರೆಗೆ ದಿನವೂ ಕರಿಬೇವಿನ ಚಟ್ನಿ ತಯಾರಿಸಿ ಆಹಾರದೊಡನೆ ತಿನ್ನುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುವುದು.

LEAVE A REPLY

Please enter your comment!
Please enter your name here