ಕರಿಂಜೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ

0
286

ಮೂಡುಬಿದಿರೆ: ಶ್ರೀ ಲಕ್ಷ್ಮೀಸತ್ಯನಾರಾಯಣ ವೀರಾಂಜನೇಯ ಸ್ವಾಮೀ ಸನ್ನಿಧಿ ಓಂ ಶ್ರೀ ಶಕ್ತಿಗುರುಮಠ ಶ್ರೀ ಜಗದ್ಗುರು ರಾಘವೇಂದ್ರ ಪೀಠ ಶ್ರೀ ಕ್ಷೇತ್ರ ಕರಿಂಜೆಯ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳಿಗೆ ಭಾನುವಾರ ಹೊತ್ತು ಕಂತುವ ಹೊತ್ತಿಗೆ ಚಾಲನೆ ನೀಡಲಾಯಿತು. ನಂದಳಿಕೆ ವಿಠಲ ಭಟ್ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮನಸ್ಸು ಎಂಬುದು ಇಂದ್ರಯಗಳಲ್ಲಿ ವಿಶಿಷ್ಟವಾದುದು. ಸತ್ಕರ್ಮ ಯಾವುದು ಎಂಬುದನ್ನು ತಿಳಿಯುವ ಶಕ್ತಿ ಮನುಷ್ಯನಿಗೆ ಇದೆ. ಬ್ರಹ್ಮಕಲಶದಂತಹ ಧರ್ಮ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಸಂಪಾದಿಸುವಂತೆ ಕರೆನೀಡಿದರು.
ಬ್ರಹ್ಮಕಲಶದ ಬ್ರಹ್ಮಾನಂದ ಪಡೆಯುವ ಸೌಭಾಗ್ಯ ಸಮಾಜ ಬಾಂಧವರಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು.

ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ,ಶ್ರೀ ವಜ್ರದೇಹಿ ಮಠ, ಗುರುಪುರದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ,ಶ್ರೀಕ್ಷೇತ್ರ, ಕರಿಂಜೆಯ ಪರಮಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಅಳದಂಗಡಿ ಅರಮನೆ ಡಾ ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕರಪ್ಪ, ಕಸ್ತೂರಿ ಪಂಜ,ಜಯಶ್ರೀ ಕೇಶವ ಕರಿಂಜೆ, ಸುರೇಶ್ ಶೆಟ್ಟಿ ಗುರ್ಮೆ,ಉದ್ಯಮಿ ಶ್ರೀಪತಿ ಭಟ್ ಜೆ. ಸುಧೀರ್ ಹೆಗ್ಡೆ ಬೈಲೂರು, ಸುರೇಶ್ ಶೆಟ್ಟಿ, ವಸಂತ ಸಾಲ್ಯಾನ್ ಕಾಪಿನಡ್ಕ, ಬಾಹುಬಲಿ ಪ್ರಸಾದ್, ಮೊದಲಾದವರಿದ್ದರು.
ಬಾಬು ಪೆರಿಂಜೆ ಪ್ರಾರ್ಥಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುದರ್ಶನ ಎಂ ಸ್ವಾಗತಿಸಿದರು.ಕಾರ್ಯದರ್ಶಿ ಸುಧಾಕರ ಪಿ.ನೂಯಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರರು.

LEAVE A REPLY

Please enter your comment!
Please enter your name here