ಕರಾವಳಿಯಲ್ಲಿ ಲಕ್ಷ ಲಕ್ಷ ಹಣಪತ್ತೆ

0
494

ಮಂಗಳೂರು ಪ್ರತಿನಿಧಿ ವರದಿ
ಸಿಎಂ ಆಪ್ತರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ .  ಈ ಬೆನ್ನಲ್ಲೇ ಮಂಗಳೂರಿನಲ್ಲೂ ಅನಧಿಕೃತ ಹಣ ಪತ್ತೆಯಾಗಿದೆ.
 
 
 
ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಬಳಿ ಎರಡು ಸಾವಿರ ಮುಖಬೆಲೆಯ 71 ಲಕ್ಷ ಹಣ ಪತ್ತೆಯಾಗಿದೆ. ಕಾರ್ಕಳ ಪೊಲೀಸರು 71 ಲಕ್ಷ ಅನಧಿಕೃತ ಹಣ ವಶಪಡಿಸಕೊಂಡಿದ್ದಾರೆ.
 
 
 
ಮಂಗಳೂರಿನಿಂದ ಕಾರ್ಕಳದತ್ತ ಬರುತ್ತಿದ್ದ ಕಾರಿನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಕಾರಿನಲ್ಲಿದ್ದ ಮಂಗಳೂರಿನ ಮೂವರು ನಿವಾಸಿಗಳನ್ನು ಬಂಧಿಸಲಾಗಿದೆ.  ಬಂಧಿತರು ಇಮ್ರಾನ್‌, ಆಸೀಫ್ ಮತ್ತು ದೀಪಕ್‌ ಎಂದು ತಿಳಿದು ಬಂದಿದೆ. ಮಂಗಳೂರಿನ ಐಟಿ ಅಧಿಕಾರಿಗಳಿಗೆ ಆರೋಪಿಗಳನ್ನು ಹಸ್ತಾಂತರ ಮಾಡಲಾಗಿದೆ.
 
 
ಕಾರ್ಕಳ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಂಗಳೂರಿನಿಂದ ಕಾರ್ಕಳದತ್ತ ಬರುತ್ತಿದ್ದ ಕಾರನ್ನು ಅಡ್ಡಕಟ್ಟಿ ತಡೆದಾಗ ಕಾರಿನಲ್ಲಿ ಬ್ಯಾಗ್ ಪತ್ತೆಯಾಗಿದೆ. ಆ ಬ್ಯಾಗ್ 71 ಲಕ್ಷ ಹಣವಿರುವುದು ಬೆಳಕಿಗೆ ಬಂದಿದೆ. ಹಣಕ್ಕೆ ಸೂಕ್ತವಾದ ದಾಖಲೆಗಳು ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

LEAVE A REPLY

Please enter your comment!
Please enter your name here