ಕರಾವಳಿಯಲ್ಲಿ ಬೃಹತ್ ರಾಷ್ಟ್ರಧ್ವಜ ಅನಾವರಣ

0
387

ರಾಷ್ಟ್ರೀಯ ಪ್ರತಿನಿಧಿ ವರದಿ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೃಹತ್ ರಾಷ್ಟ್ರಧ್ವಜ ನಿರ್ಮಾಣವಾಗಿದೆ. ವಿದೇಶದಿಂದ ತಾಯ್ನಾಡಿಗೆ ವಿಮಾನದಲ್ಲಿ ಬಂದಿಳಿಯುವ ಅನಿವಾಸಿ ಭಾರತೀಯರಲ್ಲಿ ದೇಶಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ ಈ ರಾಷ್ಟ್ರಧ್ವಜವನ್ನು ಸ್ಥಾಪಿಸಲಾಗಿದೆ.
 
 
 
ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ರಾಷ್ಟ್ರಧ್ವಜ ಸ್ತಂಭವನ್ನು ನಿರ್ಮಿಸಲಾಗಿದೆ. ಈ ಬೃಹತ್ ಗಾತ್ರದ ರಾಷ್ಟ್ರಧ್ವಜ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಶಾಶ್ವತ ಸ್ತಂಭ 100 ಅಡಿ ಎತ್ತರ, 30 ಅಡಿ ಅಗಲ ಮತ್ತು 20 ಅಡಿ ಎತ್ತರದ ರಾಷ್ಟ್ರಧ್ವಜವಿದೆ. ಈ ರಾಷ್ಟ್ರಧ್ವಜ ಕರಾವಳಿ ಭಾಗದಲ್ಲಿಯೇ ಬೃಹತ್ ಗಾತ್ರದ್ದು ಆಗಿದೆ.
 
 
 
ಈಗಾಗಲೇ ನವದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾದ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ನಿರ್ಮಿಸಲಾಗಿದೆ.

LEAVE A REPLY

Please enter your comment!
Please enter your name here