ಕರಾಟೆ ಪಟುಗಳಿಗೆ 4 ಚಿನ್ನ, 3 ಬೆಳ್ಳಿ, 1 ಕಂಚಿನ

0
652

ವರದಿ: ಕೃಷ್ಣ ಶೆಟ್ಟಿ ಎ
ಇನ್ಸ್ಟಿಟ್ಯೂಟ್ ಅಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್ ಮಂಗಳೂರು (ಕರಾಟೆ ಉಡೋಕಾನ್ ಇಂಟರ್ ನ್ಯಾಷನಲ್, ಮಲೇಷ್ಯಾ ಇದರ ಅಂಗ ಸಂಸ್ಥೆ) ಉಪ್ಪಿನಂಗಡಿ ಶಾಖೆ ಇದರ ಆಶ್ರಯದಲ್ಲಿ ಉಪ್ಪಿನಂಗಡಿಯಲ್ಲಿ ನಡೆದ 27ನೇ ರಾಜ್ಯಮಟ್ಟದ ಅಂತರ್ ಶಾಖಾ ಕರಾಟೆ ಸ್ಪರ್ಧೆಯಲ್ಲಿ ಜಪ್ಪಿನಮೊಗರು ಬಂಟರ ಸಂಘದಲ್ಲಿ ನಾಗೇಶ್ ಎಕ್ಕೂರು ಇವರಿಂದ ತರಬೇತಿ ಪಡೆದ ಕರಾಟೆ ಪಟುಗಳು 4 ಚಿನ್ನ, 3 ಬೆಳ್ಳಿ, ಹಾಗು 1 ಕಂಚಿನ ಪದಕಗಳನ್ನು ಗಳಿಸಿದ್ದಾರೆ.
 
 
65 ಕೆಜಿ ಮೇಲ್ಪಟ್ಟ ಪುರುಷರ ಕಟ ಮತ್ತು ಕುಮಿಟೆ ವಿಭಾಗದಲ್ಲಿ, ಎ.ಕೃಷ್ಣ ಶೆಟ್ಟಿ ತಾರೆಮಾರು ಇವರು 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇವರ ಮಕ್ಕಳಾದ ನಿಧಿತ್ ಕೆ ಶೆಟ್ಟಿ ತಾರೆಮಾರು 10 ವರ್ಷದ ಒಳಗಿನ ಬಾಲಕರ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗು ಮನ್ವಿತಾ ಕೆ ಶೆಟ್ಟಿ ತಾರೆಮರು 10 ವರ್ಷದ ಬಾಲಕಿಯರ ಕಟ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
 
 
14ರ ಮೇಲ್ಪಟ್ಟ ಬಾಲಕರ ಕುಮಿಟೆ ವಿಭಾಗದಲ್ಲಿ ಶ್ರೇಯಸ್ ರೈ ಬೆಳ್ಳಿ ಪದಕ, 14ರ ಮೇಲ್ಪಟ್ಟ ಬಾಲಕಿಯರ ಕುಮಿಟೆ ವಿಭಾಗದಲ್ಲಿ ಧೃತಿ ಇವರು ಬೆಳ್ಳಿ ಪದಕ, 10ವರ್ಷದ ಒಳಗಿನ ಬಾಲಕರ ಕುಮಿಟೆ ವಿಭಾಗದಲ್ಲಿ ಕೃಷ್ ಶೆಟ್ಟಿ ಬೆಳ್ಳಿ ಪದಕ ಹಾಗು 10 ವರ್ಷದ ಒಳಗಿನ ಬಾಲಕಿಯರ ಕುಮಿಟೆ ವಿಭಾಗದಲ್ಲಿ ಗ್ರೀಶ್ಮಾ ಕಂಚಿನ ಪದಕ ಪಡೆದಿದ್ದಾರೆ.

LEAVE A REPLY

Please enter your comment!
Please enter your name here