ಕಮಲದಲ್ಲಿ ತಳಮಳ!

0
357

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟವಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಇಂದು ಪ್ರತ್ಯೇಕ ಸಭೆ ನಡೆಯಲಿದೆ.
 
 
 
ಬಿಎಸ್ ವೈ ಅವರು ಏಕಪಕ್ಷೀಯ ನಿರ್ಧಾರಕ್ಕೆ ವಿರೋಧಿಸಿ ವರಿಷ್ಠರಿಗೆ ದೂರು ನೀಡುವ ಕುರಿತು ಚರ್ಚೆ ನಡೆಸಲು ಬಿಜೆಪಿ ಅತೃಪ್ತ ಮುಖಂಡರು ಸಭೆ ನಡೆಸಲಿದ್ದಾರೆ. ಈ ಸಭೆ ಬೆಂಗಳೂರಿನ ಮಲ್ಲೇಶ‍್ವರಂನ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ.
 
 
 
ಸಭೆಯಲ್ಲಿ ಸೋಮಣ್ಣ ಬೇವಿನ ಮರದ, ಸಿಟಿ ರವಿ, ನಳೀನ್ ಕುಮಾರ್ ಕಟೀಲ್, ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನಾ, ಸೊಗಡು ಶಿವಣ್ಣ, ಶಿವಯೋಗಿ ಸ್ವಾಮಿ, ಶಾಸಕ ಸುನೀಲ್ ಕುಮಾರ್ ಸೇರಿದಂತೆ 8-9 ನಾಯಕರು ಭಾಗಿಯಾಗಲಿದ್ದಾರೆ.
 
 
 
 
ಸಭೆಯಲ್ಲಿ ವರಿಷ್ಠರಿಗೆ ದೂರು ನೀಡುವ ಮುನ್ನ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪದಾಧಿಕಾರಿಗಳ ಾಯ್ಕೆಯಲ್ಲಿ ವ್ಯತ್ಯಾಸದ ಬಗ್ಗೆ ಅಭಿಪ್ರಾಯ ಸಂಗ್ರಹ ಮತ್ತು ಪದಾಧಿಕಾರಿ ಆಯ್ಕೆಯಲ್ಲಿ ಗೊಂದಲದ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಯಲಿದೆ.ಪರಿಶೀಲನೆ ನಂತರ ವರಿಷ್ಠರಿಗೆ ದೂರು ನೀಡುವ ಕುರಿತು ಚರ್ಚೆ ನಡೆಯಲಿದ್ದು ಬಳಿಕ ರಾಜ್ಯ ಕೋರ್ ಕಮಿಟಿಗೆ ದೂರು ನೀಡಲಿದ್ದಾರೆ. ಕೋರ್ ಕಮಿಟಿ ನಿರ್ಧಾರ ಕೈಗೊಳ್ಳದಿದ್ದರೆ ಪಕ್ಷದ ವರಿಷ್ಠರಿಗೆ ದೂರು ನೀಡಲಾಗುತ್ತದೆ.
 
 
 
ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ನೇಮಕ ಬಗ್ಗೆ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಭುಗಿಲೆದ್ದಿದೆ. ಯಡಿಯೂರಪ್ಪನವರು ತನ್ನ ಆಪ್ತರಿಗೆ ಮಾತ್ರ ಅವಕಾಶ ನೀಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here