ಸಿನಿ ವಿಶೇಷ ವರದಿ
ದಿನದಿಂದ ದಿನಕ್ಕೆ ‘ಕಬಾಲಿ’ ಜ್ವರ ಹೆಚ್ಚಾಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವಂತೆಯೇ ಪ್ರಚಾರದ ಅಬ್ಬರ ಭುಗಿಲು ಮುಟ್ಟುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಭಾರಿ ಸಂಚಲನ ಮೂಡಿಸಿರುವ ಬಹಿನಿರೀಕ್ಷಿತ ‘ಕಬಾಲಿ’ ಚಿತ್ರವು ಇದೇ ಬರುವ ಜುಲೈ 22 ಶುಕ್ರವಾರದಂದು ತೆರೆ ಮೇಲೆ ಅಪ್ಪಳಿಸಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಸದ್ದು ಮಾಡಿರುವ ವೇಗದಲ್ಲೇ ಗೊಂದಲವನ್ನು ಸೃಷ್ಟಿಸಿದೆ. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಪಂಚತಾರಾ ಹೋಟೆಲ್ಗಳಲ್ಲೂ ಪ್ರದರ್ಶಿಸಲು ಚಿತ್ರತಂಡ ಮುಂದಾಗಿದೆ.
ಆದ್ರೆ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ರಜನಿಕಾಂತ್ ಅಭಿಮಾನಿಗಳು, ಪ್ರೇಕ್ಷಕರು ಕಾಯುತ್ತಿದ್ದಾರೆ. ಇನ್ನೂ ಚಿತ್ರ ವೀಕ್ಷಿಸಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಪ್ರೇಕ್ಷಕರು ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಕಬಾಲಿ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಲವು ಕಂಪನಿಗಳು ರಜೆಯನ್ನು ಘೋಷಿಸಿದೆ.
ಇನ್ನೂ ತಮಿಳು ಚಿತ್ರ ಕಬಾಲಿ ಸಿನಿಮಾವನ್ನು ತೆಲಗು,ಮಲೆಯಾಳಂ ಹಾಗೂ ಹಿಂದಿ ಡಬ್ ಮಾಡಲಾಗಿದೆ. ಕರ್ನಾಟಕದಲ್ಲಿ ನಾಲ್ಕು ಭಾಷೆಗಳಲ್ಲಿ ಚಿತ್ರ ಬಿತ್ತರಗೊಳ್ಳಲಿದೆ.
ವಾಹನ-ತಿಂಡಿಗಳಲ್ಲಿ ‘ಕಬಾಲಿ’
ಚಿತ್ರದ ಪ್ರಾಯೋಜಕತ್ವ ವಹಿಸುತ್ತಿರುವ ಏರ್ ಏಷ್ಯಾ ವಿಮಾನಯಾನ ಸಂಸ್ಥೆಯು ಕಬಾಲಿ ವಿಶೇಷ ವಿಮಾನ ಸೇವೆಯೊಂದಿಗೆ ರಜನಿ ಪೋಸ್ಟರ್ ಗಳನ್ನು ಲಗತ್ತಿಸಿದ್ದರೆ ಹೊಸೂರು ಮೂಲದ ಡೀಲರ್ ವೊಂದು ಮಾರುತಿ ಸುಜುಕಿ ಸ್ವಿಫ್ಟ್ ಕಬಾಲಿ ವಿಶೇಷ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿತ್ತು. ಅತ್ತ ಮಲೇಷ್ಯಾದಲ್ಲಿ ಲಂಬೋರ್ಗಿನಿ ಸೂಪರ್ ಕಾರಿಗೂ ಕಬಾಲಿ ಬಣ್ಣ ಬಳಿಯಲಾಗಿತ್ತು. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಕಬಾಲಿ ಡಬಲ್ ಡೆಕ್ಕರ್ ಬಸ್ ಈಗ ಜನ ಮನ್ನಣೆಗೆ ಪಾತ್ರವಾಗಿದೆ. ವಾಹನಗಳ ಮೇಲೆ ಪ್ರಭಾವ ಬೀರುತ್ತಿರುವ ಕಬಾಲಿ ತಿನ್ನುವ ಆಹಾರದ ಮೇಲೂ ತನ್ನ ಪ್ರಭಾವವನ್ನು ಬೀರಿದೆ. ಹೋಟೆಲ್ ನಲ್ಲಿ ಮೆನುವಿಲ್ಲೂ ಕಬಾಲಿ ಸ್ಪೆಷಲ್ ಡಿಶ್ ಇದೆ. ಚೆನ್ನೈ ನ ಹೋಟೆಲ್ ವೊಂದರಲ್ಲಿ ‘ಕಬಾಲಿ ಬಿರಿಯಾನಿ’ಯೂ ರೆಡಿಯಾಗಿದೆ. ಆಟೋದಲ್ಲಿ ಕಬಾಲಿ ಬಿರಿಯಾನಿ ಸರ್ವ್ ಮಾಡುತ್ತಿದ್ದಾರೆ. ಇನ್ನೂ ಕಬಾಲಿ ಎಲ್ಲೆಲ್ಲಿ ತನ್ನ ಹವಾ ಹರಡುತ್ತಾ ಎಂದು ಕಾದು ನೊಡಬೇಕಿದೆ.