ಕಬಾಲಿ ಚಿತ್ರ ಲೀಕ್: ಕೋರ್ಟ್ ಮೊರೆ ಹೋದ ನಿರ್ಮಾಪಕರು

0
367

 
ಸಿನಿ ವರದಿ: ಲೇಖಾ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಚಿತ್ರ ಬಿಡುಗಡೆ ಮುನ್ನವೇ ಆನ್ ​ಲೈನ್​ನಲ್ಲಿ ಲೀಕ್ ಆಗಿರುವುದು ಚಿತ್ರತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ನಿರ್ಮಾಪಕರು ಮಡ್ರಾಸ್ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.
 
 
ಜುಲೈ 22ರಂದು ಏಕಕಾಲದಲ್ಲಿ ದೇಶ-ವಿದೇಶಗಳಲ್ಲಿ ತೆರೆಕಾಣಲಿರುವ ಕಬಾಲಿ ಚಿತ್ರ ಆನ್​ಲೈನ್​ನಲ್ಲಿ ಲೀಕಾಗಿದೆ ಎಂಬ ಸುದ್ದಿತಿಳಿದು ಬಂದಿದ್ದು, ನಿರ್ಮಾಪಕ ಎಸ್. ಥನು ಮಡ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಾನೂನು ಬಾಹಿರವಾಗಿ ಚಿತ್ರವನ್ನು ಡೌನ್​ ಲೋಡ್ ಮಾಡಲಾಗುತ್ತಿದೆ ಎಂದು ಅವರು ತಿಲಿಸಿದ್ದಾರೆ.
 
 
 
ಕಾನೂನು ಬಾಹಿರವಾಗಿ ನೂರಾರು ವೆಬ್ ತಾಣಗಳು ಚಿತ್ರವನ್ನು ಡೌನ್ ಲೋಡ್ ಮಾಡಿರುವುದು ಗಮನಕ್ಕೆ ಬಂದಿದ್ದು, ಈ ಕೂಡಲೇ ಆ ಎಲ್ಲಾ ವೆಬ್ ತಾಣಗಳನ್ನು ಸ್ಥಗಿತಗೊಳಿಸಬೇಕೆಂದು ಮನವಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
 
 
ಕಬಾಲಿ ಚಿತ್ರವನ್ನು ಅಕ್ರಮವಾಗಿ ಡೌನ್​ ಲೋಡ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿ, ಸೇವೆಯನ್ನೇ ನಿಲ್ಲಿಸುವ ಬಗ್ಗೆ ಮಾರ್ಗದರ್ಶನ ನೀಡುವಂತೆಯೂ ಥನು ಅವರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ

LEAVE A REPLY

Please enter your comment!
Please enter your name here