ಕಬಾಲಿ ಚಿತ್ರ ಪ್ರಚಾರಕ್ಕಾಗಿ ವಿಶೇಷ ವಿಮಾನ

0
423

 
ಸಿನಿ ವರದಿ : ಲೇಖಾ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ, ಬಹು ನಿರೀಕ್ಷಿತ ‘ಕಬಾಲಿ’ ಚಿತ್ರದ ಪೂರ್ವ ಪ್ರಚಾರಕ್ಕಾಗಿ ವಿಮಾನಯಾನ ಕಂಪನಿ ಏರ್​ಏಷ್ಯಾ ಈಗ ಅಧಿಕೃತ ಪ್ರಚಾರ ಪಾಲುದಾರರಾಗಿ ಚಿತ್ರ ತಂಡದ ಜತೆ ಕೈಜೋಡಿಸಿದೆ.
 
 
 
ನಟ ರಜನಿಕಾಂತ್ ಸೇರಿದಂತೆ ಚಿತ್ರತಂಡಕ್ಕೆ ವಿಭಿನ್ನವಾಗಿ ಶುಭಕೋರುವ ನಿಟ್ಟಿನಲ್ಲಿ ಹಾಗೂ ಪ್ರಚಾರ ಸಂಬಂಧ ‘ಕಬಾಲಿ’ ವಿಶೇಷ ವಿಮಾನವನ್ನೇ ಸಿದ್ಧಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
 
 
 
ರಿಯಾಯಿತಿ ದರದಲ್ಲಿ ಈ ವಿಮಾನದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶ ಹೊಂದಿದೆ. ಏರ್​ಏಷ್ಯಾದ ಈ ವಿಶೇಷ ವಿನ್ಯಾಸದ ‘ಕಬಾಲಿ’ ವಿಮಾನ ಬೆಂಗಳೂರು, ನವದೆಹಲಿ, ಗೋವಾ, ಪುಣೆ, ಚಂಡೀಗಢ, ಜೈಪುರ, ಗುವಾಹಟಿ, ಇಂಪಾಲ್, ವಿಝಾಗ್ ಮತ್ತು ಕೊಚ್ಚಿ ಸಂಪರ್ಕ ಸೇತುವಾಗಿ ಹಾರಾಡಲಿವೆ. ಕಂಪನಿ ಇದಕ್ಕೆಂದೇ ಒಟ್ಟು 6 ವಿಮಾನವನ್ನು ಮೀಸಲಿರಿಸಿದೆ.
 
 
 
ಮೊದಲ ದಿನದ ಮೊದಲ ಶೋವನ್ನು ಚೆನ್ನೈನಲ್ಲಿ ನೋಡಲಿಚ್ಚಿಸುವ ಬೆಂಗಳೂರಿನ ಅಭಿಮಾನಿಗಳಿಗಾಗಿಯೇ ವಿಶೇಷ ವಿಮಾನ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಈಗಾಗಲೇ ದೇಶಾದ್ಯಂತ ‘ಕಬಾಲಿ’ ಒಂದು ಹಂತದ ಹವಾ ಎಬ್ಬಿಸಿದೆ.
 
 
 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್​ಏಷ್ಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರ್ ಅಬ್ರಾಲ್, ವಿಶ್ವದ ಎಲ್ಲೆಡೆ ಇರುವ ರಜನಿಕಾಂತ್ ಅಭಿಮಾನಿಗಳು ವಿಶೇಷ ವಿಮಾನದಲ್ಲಿ ಸಂಚರಿಸಬಹುದು. ಅವರಿಗೆಂದೇ ಇದನ್ನು ವಿಶೇಷವಾಗಿ ಸಿದ್ಧಗೊಳಿಸಲಾಗಿದೆ ಎಂದಿದ್ದಾರೆ.
 
 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಕಲೈಪುಲಿ ಎಸ್. ಥಾನು,ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಏರ್​ಲೈನ್ ಕಂಪನಿ ತನ್ನ ವಿಮಾನವೊಂದನ್ನು ‘ಕಬಾಲಿ’ ಚಿತ್ರಕ್ಕೆಂದೇ ಮೀಸಲಿಡುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here