ಕಬಡ್ಡಿ ಪಂದ್ಯಾವಳಿ

0
298

 
ವರದಿ: ಸಾತ್ವಿಕ ಸಂಘ
ನಗರದ ನೆಹರು ಮೈದಾನದಲ್ಲಿ ಮೈ.14 ಮತ್ತು 15 ರಂದು ಮುಕ್ತ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಚಲನಚಿತ್ರ ನಾಯಕ ನಟ ಜಶ್ವಂತ್ ಜಾಧವ ತಿಳಿಸಿದ್ದಾರೆ.
 
 
ನರೇಂದ್ರ ಮೋದಿ ಕಪ್ ಎಂದು ಪ್ರಶಸ್ತಿ ನೀಡುತ್ತಿದ್ದು ಪಂದ್ಯಗಳನ್ನು ಹೊನಲು ಬೆಳಕಿನಲ್ಲಿ ನಡೆಸಲಾಗುತ್ತದೆ ಎಂದು ಜಶ್ವಂತ್ ತಿಳಿಸಿದ್ದಾರೆ.
ನಗರದ ಸೆಟ್ಲಮೆಂಟ್ ಪ್ರದೇಶದ ದಿ.ಲಾಲಪ್ಪ ಈ ಜಾಧವ ಕುಟುಂಬ ಹಾಗೂ ಹು-ಧಾ ಜಿಲ್ಲಾ ಅಮೆಚ್ಯೂರ ಕಬ್ಬಡ್ಡಿ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಅಮೆಚ್ಯೂರ ಕಬ್ಬಡ್ಡಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪಂದ್ಯಾವಳಿ ನಡೆಯಲಿದೆ.
 
 
65 ಕೆ.ಜಿ ಒಳಗಿನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದ್ದು, ಪ್ರಥಮ ಬಹುಮಾನ 30 ಸಾವಿರ ರೂ. ದ್ವಿತೀಯ 20 ಸಾವಿರ ರೂ. ತೃತೀಯ 10 ಸಾವಿರ ರೂ. ಹಾಗೂ ನಾಲ್ಕನೇಯ ಬಹುಮಾನ 5 ಸಾವಿರ ರೂ. ನೀಡಲಾಗುವುದು. ಉತ್ತಮ ರೀಡರ್, ಕ್ಯಾಚರ್, ಉತ್ತಮ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಜಶ್ವಂತ್ ಜಾಧವ (9964375916), ಮಂಜುನಾಥ ಜಾಧವ (9916245060), ಅನೀಲ ಹಾರುಗೇರಿ (9845203313), ಚಂದ್ರು ಗುಡಗೇರಿ (7899819173), ನರೇಂದ್ರ ಜಾಧವ (9844522172) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here