ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಬ್ರಹ್ಮಾಸ್ತ್ರ

0
395

ರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರು ಹಾಗೂ 1000 ಮುಖ ಬೆಲೆಯ ನೋಟುಗಳ ಮೇಲೆ ಮಧ್ಯರಾತ್ರಿಯಿಂದಲೇ ನಿಷೇಧ ಹೇರಿದೆ.ಈ ನೀತಿ ನಿಜಕ್ಕೂ ಕಪ್ಪು ಹಣ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ಮೇಲೆ ನಿಜಕ್ಕೂ ಗದಾ ಪ್ರಹಾರ ಮಾಡಿದ್ದಾರೆ.
 
 
ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟುಗಳ ಹಾವಳಿ ವಿರುದ್ಧ ನೇರ ಸಮರಕ್ಕೆ ನಿಂತಿರುವ ಕೇಂದ್ರ ಸರ್ಕಾರ ತನ್ನ ಅಂತಿಮ ಪ್ರಯತ್ನವಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ 500 ಹಾಗೂ 1000 ರು ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ನಿನ್ನೆ ರಾತ್ರಿ ದಿಢೀರ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 500 ಮತ್ತು 1000 ರು ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಘೋಷಣೆ ಮಾಡಿದರು.
 
 
 
ಕೇಂದ್ರ ಸರ್ಕಾರ ನಾಳೆಯಿಂದಲೇ ಹೊಸ ಮಾದರಿಯ 500 ರು. ಹಾಗೂ 2000 ರು. ಮುಖಬೆಲೆಯ ನೋಟುಗಳ ಚಲಾವಣೆಗೆ ಮುಂದಾಗಿದೆ. ಇದೇ ಕಾರಣಕ್ಕೆ ಇಂದು ಮತ್ತು ನಾಳೆ ಬ್ಯಾಂಕ್ ಗಳು ಕಾರ್ಯ ಸ್ಥಗಿತಗೊಳಿಸಲಿವೆ. ಈ ಅವಧಿಯಲ್ಲಿ ಹೊಸ ನೋಟುಗಳನ್ನು ವ್ಯವಸ್ಥಿತವಾಗೆ ದೇಶಾದ್ಯಂತ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆರ್ ಬಿಐ ಕೂಡ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡಿದೆ.
 
 
 
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪ್ರಮುಖ ಅಂಶಗಳು ಮತ್ತು ಕ್ರಮಗಳು ಇಲ್ಲಿವೆ.
* ಈಗಾಗಲೇ 1.25 ಲಕ್ಷ ಕೋಟಿ ಕಪ್ಪು ಹಣ ವಸೂಲಾಗಿದೆ. ಇದೀಗ ಪ್ರಧಾನಿ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
* 500, 1000 ರೂ. ನೋಟುಗಳ ಮುದ್ರಣ ಬಂದ್ ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ನೋಟುಗಳನ್ನು ನಿಷೇಧ ಮಾಡಲಾಗಿದೆ.
* ಸರ್ಕಾರ ಬ್ಯಾನ್ ಆದ ನೋಟುಗಳನ್ನು ಬದಲಾಯಿಸಿಕೊಳ್ಳಲು 50 ದಿನ ಗಡುವು ನೀಡಿದ್ದು, 50 ದಿನಗಳ ಒಳಗಾಗಿ ನೋಟುಗಳನ್ನು ಬ್ಯಾಂಕ್​ಗೆ ನೀಡಿಬೇಕು. ನ.10ರಿಂದ ಡಿ.30ರವರೆಗೆ ಕಾಲಾವಕಾಶ ನೀಡಲಾಗಿದೆ.
* ಇಂದು ಮತ್ತು ನಾಳೆ ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ. ಜತೆಗೆ ಇಂದು ಬ್ಯಾಂಕ್, ಪೋಸ್ಟ್ ಆಫೀಸುಗಳೂ ಕಾರ್ಯ ನಿರ್ವಹಿಸೋದಿಲ್ಲ. ,ನವೆಂಬರ್ 11ರ ಮಧ್ಯರಾತ್ರಿವರೆಗೆ ಹಾಲಿನ ಬೂತ್‌ಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ನೋಟುಗಳು ಚಲಾವಣೆಯಾಗಿದೆ. ಪೆಟ್ರೋಲ್ ಬಂಕ್, ರಿಟೇಲ್ ಔಟ್ಲೆಟ್ ಗಳಲ್ಲಿ ಪಡೆದ ಹಣಕ್ಕೆ ದಾಖಲಾತಿ ಕಡ್ಡಾಯವಾಗಿದೆ. ಸ್ಮಶಾನ, ಚಿತಾಗಾರಗಳಲ್ಲೂ ನೋಟುಗಳ ಚಲಾವಣೆಯಾಗುತ್ತದೆ.
* ಬ್ಯಾನ್ ಆದ ನೋಟ್ ಗಳನ್ನು ಯಾವುದೇ ಬ್ಯಾಂಕ್, ಪೋಸ್ಟ್ ಆಫೀಸ್​ನಲ್ಲಿ ನೋಟು ಬದಲಿಸಿಕೊಳ್ಳಬಹುದು. ಬ್ಯಾಂಕ್​ನಲ್ಲಿ ನಗದು ರಹಿತ ವಹಿವಾಟಿಗೆ ತೊಂದರೆ ಇಲ್ಲ ನೋಟು ಬದಲಾಯಿಕೊಳ್ಳುವಾಗ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಕಾರ್ಡ್ ಗಳನ್ನು ಕಡ್ಡಾಯವಾಗಿ ತೋರಿಸಬೇಕು. ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳಬಹುದು. ನೋಟು ವಾಪಸ್ ನೀಡಲು ಡಿಸೆಂಬರ್ 30 ಡೆಡ್​ಲೈನ್ ನೀಡಲಾಗಿದೆ.
* ಡಿ. 30ರ ಒಳಗಾಗಿ ನೋಟುಗಳ ಬದಲಾವಣೆ ನೋಟುಗಳ ಬದಲಾವಣೆ ಸಾಧ್ಯವಾಗದಿದ್ದೆ ಮತ್ತೊಂದು ಅವಕಾಶ ನೀಡಲಾಗಿದೆ.
ಹೊಸ ನೋಟುಗಳಲ್ಲಿ ನ್ಯಾನೋ ಜಿಪಿಎಸ್ ಜಿಪ್ ಗಳ ಅಳವಡಿಕೆ ಮಾಡಲಾಗಿದೆ. ಚಿಪ್ ಗಳ ಮೂಲಕ ಹಣ ಶೇಖರಣೆ ಪತ್ತೆ ಹಚ್ಚುವುದು ಸುಲಭ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಮಹಾಕ್ರಾಂತಿಯಾಗಿದೆ.
* ಪೆಟ್ರೋಲ್ ಬಂಕ್, ಪ್ರವಾಸಿಗರಿಗೆ ಏರ್ಪೋರ್ಟ್‌,ಸರ್ಕಾರಿ ಬಸ್, ರೈಲು, ಗ್ಯಾಸ್ ಬಂಕ್​ಗಳಲ್ಲೂ ಹಣ ಬದಲಾಯಿಸಿಕೊಳ್ಳಬಹುದು.
* ಭ್ರಷ್ಟಚಾರ ಹಾಗೂ ಕಪ್ಪು ಹಣ್ಣ ಭಾರತಕ್ಕೆ ಅಂಟಿರುವ ರೋಗವಾಗಿದ್ದು. ಈ ನಿರ್ಧಾರದ ಮೂಲಕ ಕೇಂದ್ರ ಸರ್ಕಾರ ಕಪ್ಪು ಹಣದ ವಹಿವಾಟು ತಡೆಯಲು ದಿಟ್ಟ ಹೆಜ್ಜೆಯನ್ನಿದೆ. ಖೋಟಾ ನೋಟುಗಳ ವಹಿವಾಟು ಉಗ್ರರಿಗೆ ಲಾಭವಾಗುತ್ತಿದೆ.
* 100, 50, 20, 10, 5 ರೂ. ಮಾತ್ರವೇ ಕಾನೂನುಬದ್ಧ ನೋಟ್ ಗಳಾಗಿರುತ್ತದೆ.500, 1000 ರೂ. ನೋಟುಗಳಿಗೆ ಇನ್ನು ಮುಂದೆ ಮಾನ್ಯತೆ ಇರುವುದಿಲ್ಲ.
* ಎಟಿಎಂನಲ್ಲಿ ಪ್ರತಿದಿನ 2 ಸಾವಿರ ಮಾತ್ರ ಹೊರತೆಗೆಯಬಹುದು. ಬ್ಯಾಂಕುಗಳಲ್ಲಿ ದಿನಕ್ಕೆ 10,000, ವಾರಕ್ಕೆ 20,000 ಹಣ ತೆಗೆಯಲು ಅವಕಾಶವಿದೆ. ನವೆಂಬರ್ 25ರ ನಂತರ ಡಿಸೆಂಬರ್ 31ರ ನಡುವಿನ ಅವಧಿಗೆ ಮತ್ತೊಮ್ಮೆ ಈ ಮೊತ್ತದಲ್ಲಿ ಪರಿಷ್ಕರಣೆ ಮಾಡಲಾಗುವುದು.
* 2 ಸಾವಿರ ನೋಟು ಚಲಾವಣೆಗೆ ಆರ್​ಬಿಐ ಒಪ್ಪಿದೆ. ಇದರಿಂದ ಮುಂದಿನ ದಿನಗಳಲ್ಲಿ 2 ಸಾವಿರ ರೂ. ನೋಟು ಚಲಾವಣೆಗೆ ಬರಲಿದೆ.
* ಸ್ವಲ್ಪ ದಿನಗಳ ಬಳಿಕ ಹೊಸ 500, 2000 ನೋಟುಗಳು ಚಲಾವಣೆಗೆ ಬರಲಿವೆ. ಏಪ್ರಿಲ್ 2017ರ ಬಳಿಕ ಹೊಸ ನೋಟುಗಳು ಚಲಾವಣೆಗೆ ಬರಲಿವೆ. ಆನ್​ಲೈನ್​ ವ್ಯವಹಾರಕ್ಕೆ ಯಾವುದೇ ಅಡ್ಡಿಇಲ್ಲ.
* ಉಳಿದಂತೆ ನಗದು ರಹಿತ ವಹಿವಾಟುಗಳಾದ ಚೆಕ್, ಡಿಡಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳ ವಹಿವಾಟಿನಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ.

LEAVE A REPLY

Please enter your comment!
Please enter your name here