ಕನ್ನಡಿಗರ ಹೋಟೆಲ್ ಮೇಲೆ ದಾಳಿ

0
274

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿನಲ್ಲೂ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ಚೆನ್ನೈನಲ್ಲಿರುವ ಕನ್ನಡಿಗರ ಒಡೆತನದ ವುಡ್ ಲ್ಯಾಂಡ್ ಹೋಟೆಲ್ ಗಳ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದಾಳಿ ನಡೆಸಿದ್ದಾರೆ. ಹೋಟೆಲ್ ನ ರಿಸೆಪ್ಶನ್ ಧ್ವಂಸಗೊಳಿಸಿದ್ದು, ಕಲ್ಲು ತೂರಾಟ ಕೂಡ ನಡೆಸಿದ್ದಾರೆ.
 
 
ರಾಮನಾಥಪುರಂನಲ್ಲಿ ಕರ್ನಾಟಕ ನೋಂದಣಿಯ 10 ವಾಹನಗಳ ಮೇಲೂ ದಾಳಿ ನಡೆದಿದೆ. 2 ಬಸ್, 3ವ್ಯಾನ್ ಮತ್ತು 5ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರಕರಣ ಸಂಬಂಧ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಾಗಪಟ್ಟಣಂ, ತಿರುಚ್ಚಿ, ತಾಂಜಾವೂರ್ ಗಳಲ್ಲೂ ದಾಳಿ ನಡೆದಿದೆ. ಕಲ್ಲುತೂರಾಟ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದೆಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಕನ್ನಡಿಗರು ನಡೆಸುತ್ತಿರುವ ಉದ್ಯಮಗಳ ಬಳಿ ಬಿಗಿ ಭದ್ರತೆ ಮಾಡಲಾಗಿದೆ.
 
 
 
ಬಸ್ ಸಂಚಾರ ಸ್ಥಗಿತ: 
ಕಾವೇರಿ ಹೋರಾಟ ಮತ್ತೆ ಭುಗಿಲೇಳು ಸಾಧ್ಯತೆ ಹಿನ್ನೆಲೆಯಲ್ಲಿ ತಮಿಳುನಾಡು ಬಸ್ ಗಳ ಮತ್ತೆ ಸಂಚಾರವನ್ನು ಸ್ಥಗಿತಗೊಳಿಸಿದೆ. ಇಂದು ಬೆಳಗಿನಿಂದ ಯಾವುದೇ ಬಸ್ ಗಳು ಕರ್ನಾಟಕಕ್ಕೆ ಬಂದಿಲ್ಲ. ಇನ್ನೂ 3-4ದಿನ ತಮಿಳುನಾಡು ಬಸ್ ಸಂಚಾರ ಅಸಾಧ್ಯ ಎಂದು ತಮಿಳುನಾಡು ಸಾರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
ಬೆಂಗಳೂರಿನಲ್ಲಿ ತಮಿಳರು ನೆಲೆಸಿರುವ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶ್ರೀರಾಂಪುರ, ಓಕಳಿಪರಂ, ಕಲಾಸಿಪಾಳ್ಯ, ಪ್ರಕಾಶ್ ನಗರ ಸೇರಿದಂತೆ ಹಲವೆಡೆ ಟೈಟ್ ಪೊಲೀಸ್ ಸೆಕ್ಯೂರಿಟಿ ನೀಡಲಾಗಿದೆ ಎಂದು ಮಾಧ‍್ಯಮಕ್ಕೆ ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿದ್ದಾರೆ.
 
 
ತಮಿಳುನಾಡಿನಲ್ಲಿ ಕನ್ನಡಿಗರ ಆಸ್ತಿಪಾಸ್ತಿ ಮೇಲೆ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತವಾಗಿದೆ. ಬೆಂಗಳೂರಿನಿಂದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಬೆಂಗಳೂರು ಕೇಂದ್ರ ವಿಭಾಗ, ಕೋಲಾರ, ಚಾಮರಾಜನಗರ, ರಾಮನಗರದಿಂದ ತಮಿಳುನಾಡಿಗೆ ಬಸ್ ಗಳ ಸಂಚಾರ ಸ್ಥಗಿತವಾಗಿದೆ.

LEAVE A REPLY

Please enter your comment!
Please enter your name here