ಕನ್ನಡಿಗರ ಮೇಲೆ ದಾಳಿ

0
320

ರಾಷ್ಟ್ರೀಯ ಪ್ರತಿನಿಧಿ ವರದಿ
ಗೋವಾದಲ್ಲಿ ಕನ್ನಡಿಗರ ಮನೆ ಮೇಲೆ ಕಿಡಿಗೆಡಿಗಳು ದಾಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪಣಜಿ ಜಿಲ್ಲೆಯ ಪೊಂಡಾ ತಾಲೂಕಿನ ಯಸಗಾಂವ ಗ್ರಾಮದಲ್ಲಿರುವ ಕನ್ನಡಿಗರ 5 ಮನೆಗಳಿಗೆ ಪುಂಡರು ಬೆಂಕಿ ಹಚ್ಚಿದ್ದಾರೆ.
 
 
200ಕ್ಕೂ ಹೆಚ್ಚು ಪುಂಡರು ದಾಳಿ ನಡೆಸಿದ್ದು, ಐದು ಮನೆ, 3ಬೈಕ್ ಮತ್ತು 3 ಕಾರು ಅಗ್ನಿಗಾಹುತಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಧ್ವಂಸವಾಗಿದೆ.
 
 
ಗೋವಾ ಬಿಟ್ಟು ಕರ್ನಾಟಕಕ್ಕೆ ತೆರಳುವಂತೆ ಬೆದರಿಕೆಯೊಡ್ಡಿದ್ದಾರೆ. ಜೀವ ಭಯದಿಂದ 5 ಕುಟುಂಬಗಳು ಮನೆಗಳನ್ನು ತೊರೆದಿದ್ದಾರೆ. ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
 
 
ಪೊಂಡಾ ಪೊಲೀಸ್ ಠಾಣೆಯಲ್ಲು ದೂರು ದಾಖಲಾಗಿದೆ.ದೂರು ದಾಖಲಾದ್ರೂ ಪೊಲೀಸರು ಇನ್ನೂ ಕ್ರಮಕೈಗೊಳ್ಳಲಿಲ್ಲ. ಕಿಡಿಗೇಡಿಗಳು ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here