ಕನಸು ನನಸಾಯಿತು…!!!

0
2960

ನಿತ್ಯ ಅಂಕಣ-೭೯ : ತಾರಾನಾಥ್‌ ಮೇಸ್ತ, ಶಿರೂರು.
ಲಾಡ್ಕು ಬಾಯಿ ಎನ್ನುವ, ಮರಾಠಿ ಮಹಿಳೆ ನಿತ್ಯಾನಂದರ ಭಕ್ತೆ. ಪಾಲಘರ್ ತಾಲೂಕಿನ ಸಾತ್ ಪಾಟಿ ಇಕೆಯ ಊರು. ಒಂದು ದಿನ ಈಕೆಯ ಮಗ ಪ್ರದೀಪ ಎನ್ನುವನಿಗೆ ಮೈಯಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ವಿಪರೀತಗೊಂಡು ತಲೆಗೆ ಏರುತ್ತದೆ. ಆಕೆ ಏನು ಮಾಡಬೇಕೆಂದು ತೋರುವುದಿಲ್ಲ. ಜ್ವರದ ಲಕ್ಷಣಗಳು ಕಂಡುಬಂದಿರುವ ಮೊದಲ ಹಂತದಲ್ಲಿ ಮಗನಿಗೆ ವೈದ್ಯರಲ್ಲಿ ತಪಾಸಣೆ ನಡೆಸಿದ್ದಳು. ವೈದ್ಯರು ನೀಡಿದ ಔಷಧೋಪಾಚಾರಗಳು ಫಲ ನೀಡಿರುವುದಿಲ್ಲ. ಮಗನ ಚಿಂತೆಯಲ್ಲಿ ಲಾಡ್ಕು ಬಾಯಿ ಇರುತ್ತಾರೆ.

ರಾತ್ರಿ ಹೊತ್ತು, ಜ್ವರಬಾಧಿತ ಮಗನೊಂದಿಗೆ ಲಾಡ್ಕುಬಾಯಿ ಮಲಗಿಕೊಂಡಿದ್ದಾಳು. ನಡು ರಾತ್ರಿ ಸುಮಾರಿಗೆ ಆಕೆಗೊಂದು ಕನಸು ಬಿಳುತ್ತದೆ. ಕನಸಲ್ಲಿ ದೇವಸ್ವರೂಪ ಗುರುದೇವ ನಿತ್ಯಾನಂದರು ಕಂಡು ಬರುತ್ತಾರೆ. ಗುರುದೇವರು, “ನಾಳೆಯ ದಿನ ಮಗನನ್ನು ಕರೆದುಕೊಂಡು ಗಣೇಶಪುರಿಗೆ ಕರೆ ತರುವಂತೆ ಅಪ್ಪಣೆ ಮಾಡುತ್ತಾರೆ, ನಾಳೆಯ ದಿನ ಎಲ್ಲವೂ ಸರಿ ಆಗುತ್ತದೆ ಚಿಂತಿಸ ಬೇಕಾಗಿಲ್ಲ, ಎಂದು ಕನಸಲ್ಲಿ ಸಾಂತ್ವನ ನುಡಿದ ನಿತ್ಯಾನಂದರು ಕನಸಿನ ಚಿತ್ತಾರದಿಂದ ಅದೃಶ್ಯರಾಗುತ್ತಾರೆ.

ಮರುದಿನ ಬೆಳಿಗ್ಗೆ ಲಾಡ್ಕುಬಾಯಿ ಮಗನನ್ನು ಎತ್ತುಕೊಂಡು ಗಣೇಶಪುರಿಗೆ ತೆರಳಲು ಸಿದ್ದಳಾಗುತ್ತಾಳೆ. ಆವಾಗ ಸಂಬಂಧಿಕರು, ಊರಜನರು ಮಗುವಿನ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ. ಅಷ್ಟು ದೂರ ಹೋಗುವುದು ಬೇಡ, ಮಗು ಬದುಕಿ ಉಳಿಯವುದು ಕಷ್ಟ ಇದೆ, ಹಾಗಾಗಿ ಸಮೀಪದ ವೈದ್ಯರಲ್ಲಿ ತೋರಿಸುವುದು ಉತ್ತಮವೆಂದು ಸಲಹೆ ನೀಡುತ್ತಾರೆ. ಲಾಡ್ಕುಬಾಯಿ ಯಾರ ಮಾತನ್ನು ಕೇಳದೆ, ಗುರುದೇವರ ಅಪ್ಪಣೆ ಪಾಲಿಸಬೇಕೆಂಬ ಹಠದಿಂದ ಮಗನ ಎತ್ತಿಕೊಂಡು ಗಣೇಶಪುರಿಗೆ ತಲುಪುತ್ತಾಳೆ.

ಗುರುದೇವರು ಆವಾಗ ಕೈಲಾಸ ಆಶ್ರಮದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದರು. ಲಾಡ್ಕುಬಾಯಿ ಕೈಲಾಸ ಆಶ್ರಮದಡೆಗೆ ಬಂದಾಗ, ಅಲ್ಲಿ ಸೇರಿರುವ ಭಕ್ತರ ಸಾಲು ಕಂಡ ಅವಳು ದಂಗಾಗಿ ಹೋಗುತ್ತಾಳೆ. ಏನೂ ಮಾಡುವುದು..? ನಾನು ಸಾಮಾನ್ಯ ಮಹಿಳೆ..! ನನ್ನ ಪರಿಸ್ಥಿತಿ ಗುರುದೇವರಿಗೆ ಮಾತ್ರ ಗೊತ್ತು..! ಬೇಗನೆ ಗುರುದೇವರಡೆ ನನಗೆ ಹೋಗಬೇಕಾಗಿದೆ. ಮಗನಿಗೆ ಜ್ವರವು ಎರುತ್ತಿದೆ, ಏನು ಮಾಡುವುದು..!! ಅಸಹಾಯಕಳಾದ ಲಾಡ್ಕುಬಾಯಿ ಮನದೊಳಗೆ ಚಿಂತೆಗೊಳಗಾಗುತ್ತಾಳೆ. ಹಾಗೆಯೆ ಲಾಡ್ಕುಬಾಯಿ ಮಗುವನ್ನು ಹಿಡಿದುಕೊಂಡು ಭಕ್ತರ ಸಾಲಿನಲ್ಲಿ ಕೊನೆಯವಳಾಗಿ ನಿಂತುಕೊಂಡಳು.

ಪರಮಭಕ್ತೆ ಲಾಡ್ಕುಬಾಯಿಯ ಮನದಾಳದ ಚಿಂತೆಯು ಕೈಲಾಸ ಆಶ್ರಮದಲ್ಲಿದ್ದ ಗುರುದೇವರಿಗೆ ತಿಳಿಯುತ್ತದೆ. ಅಲ್ಲಿದ್ದ ಸ್ವಯಂಸೇವಕನನ್ನು ನಿತ್ಯಾನಂದರು ಕರೆಯುತ್ತಾರೆ. ಹೊರಗೊಬ್ಬಳು ಭಕ್ತೆ ಮಗುವನ್ನು ಎತ್ತಿಕೊಂಡು ನಿಂತುಕೊಂಡಿದ್ದಾಳೆ. ಆಕೆಯನ್ನು ಬೇಗನೆ ಒಳಕಳಿಸುವಂತೆ ಆಜ್ಞೆಮಾಡುತ್ತಾರೆ. ಸೇವಕ ಮಗು ಎತ್ತಿಕೊಂಡಿರುವ ಮಹಿಳೆಯನ್ನು ಒಳಗೆ ದರ್ಶನ ಪಡೆಯಲು ಅವಕಾಶ ನೀಡುತ್ತಾನೆ. ಒಳಗೆ ಬಂದ ಲಾಡ್ಕುಬಾಯಿ ಮಗುವನ್ನು ಗುರುದೇವರ ಚರಣದಡೆ ಇಟ್ಟು ನಮಸ್ಕರಿಸುತ್ತಾಳೆ. ಆವಾಗ ಗುರುದೇವರು ‘ಏನು ಆಗುವುದಿಲ್ಲ, ಮಗುವಿಗೆ ಬಿಸಿನೀರಿನ ಕುಂಡದ ತೀರ್ಥವನ್ನು ಕುಡಿಸು’ ಎಂದು ಅಭಯ ನೀಡುತ್ತಾರೆ. ಗುರುಗಳ ಉಪದೇಶದಂತೆ ಲಾಡ್ಕುಬಾಯಿ ಮಗುವಿಗೆ ಉಪಚರಿಸುತ್ತಾಳೆ. ಮಗು ಮರುದಿನ ಚೇತರಿಸಿಕೊಂಡು ಬದುಕುಳಿಯುತ್ತದೆ. ಚಿತ್ರ:ಸಾಂದರ್ಭಿಕ, ಕೃಪೆ ಅಂತರ್ಜಾಲ

Advertisement

LEAVE A REPLY

Please enter your comment!
Please enter your name here