ಕಥೆ ಪುಸ್ತಕಗಳನ್ನು ಕೊಳ್ಳಲು ಮಕ್ಕಳಿಗೆ ಕರೆ

0
464

ಉಜಿರೆ ಪ್ರತಿನಿಧಿ ವರದಿ
ದೀಪಾವಳಿಗೆ ಪಟಾಕಿ ಕೊಳ್ಳುವುದರ ಬದಲು ಕಥೆ ಪುಸ್ತಕಗಳನ್ನು ಕೊಳ್ಳಿ ಎಂದು ಎಸ್ಡಿಎಂ ರೆಸಿಡೆಂಶಿಯಲ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಕೃಷ್ಣಮೂರ್ತಿ ಮಕ್ಕಳಿಗೆ ಸಲಹೆ ನೀಡಿದರು.
 
ಉಜಿರೆಯ ರೋಟರಿ ಕ್ಲಬ್ ಹಾಗೂ ಸೆಲ್ಕೋ ಫೌಂಡೇಶನ್ ಸಹಯೋಗದೊಂದಿಗೆ ರತ್ನಮಾನಸದಲ್ಲಿ ಆಯೋಜಿಸಿದ್ದ 6 ದಿನಗಳ ‘ರಜಾ ವಿತ್ ಮಜಾ’ ಚಳಿಗಾಲ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಶಾಲೆಗೆ ಕಳುಹಿಸಿದ ತಕ್ಷಣ ಪಾಲಕರ ಜವಾಬ್ದಾರಿ ಕಳೆಯುವುದಿಲ್ಲ. ಶಾಲೆಯಲ್ಲಿ ಮಕ್ಕಳು ಎಷ್ಟು ಕಲಿಯುತ್ತಿದ್ದಾರೆ ಎಂಬುದನ್ನೂ ಪೋಷಕರು ಗಮನಿಸಬೇಕು. ಹಾಗಾದಾಗ ಮಾತ್ರ ಮಕ್ಕಳು ಭವಿಷ್ಯದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.
 
ಮೇಜರ್ ಜನರಲ್ ಎಂ.ವಿ ಭಟ್ ಮಾತನಾಡಿ, ಈಗಿನ ಮಕ್ಕಳು ಪಠ್ಯವನ್ನು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಆದರೆ, ಸ್ವಂತವಾಗಿ ಯಾವ ಕೆಲಸ ಕೊಟ್ಟರೆ ವಿಫಲರಾಗುತ್ತಾರೆ. ಆದ್ದರಿಂದ, ವಿಷಯ ಜ್ಞಾನ ಹಾಗೂ ಅದರ ಬಗ್ಗೆ ಕಲ್ಪನೆ ಇರಬೇಕು ಎಂದು ಅಭಿಪ್ರಾಯಪಟ್ಟರು.
 
ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾರಾದ. ದಿನೇಶ ಚೌಟ ಮಾತನಾಡಿ, ಟಿ.ವಿ ನೋಡುತ್ತಾ ಕಣ್ಣಿಗೆ ಕೆಲಸ ನೀಡುತ್ತಿದ್ದೇವೆ ವಿನಹ ನಮ್ಮ ಆಲೋಚನೆಗಳು ಸತ್ತು ಹೋಗಿವೆ. ಹಾಗಾಗದೆ, ಮಕ್ಕಳು ವಿವೇಚನಾ ಶಕ್ತಿಯನ್ನು ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು.
 
ವೇದಿಕೆಯಲ್ಲಿ ರತ್ನಮಾನಸದ ಪಾಲಕ ಕೃಷ್ಣಯ್ಯ ಶೆಟ್ಟಿ, ರೋಟರಿಯ ಅಧ್ಯಕ್ಷರಾದ ಡಿ.ಎಂ ಗೌಡ ಉಪಸ್ಥಿತರಿದ್ದರು. ಶಿಬಿರದಲ್ಲಿ ಜಿಲ್ಲೆಯ ಸುಮಾರು 21 ಶಾಲೆಗಳಿಂದ ತಲಾ ಎರಡರಂತೆ 42 ಮಕ್ಕಳು ಭಾಗವಹಿಸಿದ್ದರು.
 
ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಸೆಲ್ಕೋ ಶಿಕ್ಷಕಿ ಶೋಭಿತ ಶೆಟ್ಟಿ ನಿರೂಪಿಸಿದರು. ಸೆಲ್ಕೋ ಶಿಕ್ಷಕಿ ಸುಮಿತ್ರ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಲಾವಣ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸೆಲ್ಕೋ ಶಿಕ್ಷಕಿ ಅಮೃತ ವಂದಿಸಿದರು.

LEAVE A REPLY

Please enter your comment!
Please enter your name here