ನಮ್ಮ ಪ್ರತಿನಿಧಿ ವರದಿ
ಮೋದಿ ಮೋಡಿ ವಿಶ್ವದೆಲ್ಲೆಡೆಯಾಗುತ್ತಿದೆ. ಇದೀಗ ಮೋದಿ ಮೋಡಿ ಕತಾರ್ ನಲ್ಲೂ ಕ್ಲಿಕ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೋಹಾ ಭೇಟಿ ಸಖತ್ ಹಿಟ್ ಆಗಿದೆ. ಭಾರತದ ಮೇಕ್ ಇನ್ ಇಂಡಿಯಾ ಯೋಜನೆಗೆ 40ಸಾವಿರಕೋಟಿ ರುಪಾಯಿ ಯನ್ನು ಕತಾರ್ ನಿಂದ ತರಿಸುವಲ್ಲಿ ಮೋದಿ ಯಶಗಳಿಸಿದ್ದಾರೆ. ಭಾರತದ ಬಂಡವಾಳ ಮತ್ತು ಮೂಲಸೌಕರ್ಯ ನಿಧಿಗೆ ಈ ಬೃಹತ್ ಮೊತ್ತ ನೀಡುವುದಾಗಿ ಕತಾರ್ ಹೇಳಿದೆ. ಒಪ್ಪಂದಕ್ಕೆ ಕತಾರ್ ಹಾಗೂ ಭಾರತ ಸಹಿ ಮಾಡಿವೆ. ಕತಾರ್ ನಲ್ಲಿ 2022ರಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ನಡೆಯಲಿದ್ದು ಈ ವೇಳೆ ಭಾರತೀಯ ಕಂಪೆನಿಗಳಿಗೆ ಮೂಲಸೌಕರ್ಯ ಹೂಡಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಕತಾರ್ ಆಹ್ವಾನವನ್ನು ನೀಡಿದೆ.