ಕಣ್ಮನ ಸೆಳೆದ ಕರಗ ಮಹೋತ್ಸವ

0
411

 
ಬೆಂಗಳೂರು ಪ್ರತಿನಿಧಿ ವರದಿ
ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಐತಿಹಾಸಿಕ ಕರಗ ಶಕ್ತೋತ್ಸವಕ್ಕೆ ಶುಕ್ರವಾರ ಅದ್ದೂರಿ ತೆರೆ ಬಿದ್ದಿದೆ. ಹಳೆ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲೂ ಕರಗ ಸಂಚಾರ ನಡೆಯಿತು.
 
ನಗರದ ತಿಗಳರ ಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗ ಮಹೋತ್ಸವ ಇಂದು ಆರಂಭಗೊಂಡು, ರಾತ್ರಿ 12 ಗಂಟೆಗೆ ಕರಗ ಮೆರವಣಿಗೆ ಹೊರಟು ಶನಿವಾರ ಬೆಳಗ್ಗೆ 6ರರವರೆಗೆ ನಗರದ ವಿವಿಧೆಡೆ ಸಂಚರಿಸಿದೆ.
 
 
ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್ ಪೇಟೆ, ಸುಣ್ಣಕಲ್ ಪೇಟೆಗಳಲ್ಲಿ ಹೂವಿನ ಕರಗದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕುಲಪುರೋಹಿತರ ಮನೆಯಲ್ಲಿ ಹೂವಿನ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ನಂತರ ಕರಗ ಸೂರ್ಯೋದಯದ ವೇಳೆಗೆ ಮರಳಿ ಧರ್ಮರಾಯನ ದೇಗುಲ ಸೇರಿತು.
 
 
ಸಾವಿರಾರು ಭಕ್ತರು ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡಿದ್ದಾರೆ.ಈ ಸಡಗರದಲ್ಲಿ ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್, ಮೇಯರ್ ಮಂಜುನಾಥ ರೆಡ್ಡಿ ಸೇರಿ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here