ಕಣ್ಣಾನ್ನೂರಿನಲ್ಲಿ ʻರೈಲುʼಚಲಿಸಲೇ ಇಲ್ಲ!

0
1260

ನಿತ್ಯ ಅಂಕಣ ಭಾಗ-೧

ಭಗವಾನ್‌ ನಿತ್ಯಾನಂದರು ಒಮ್ಮೆ ರೈಲು ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆವಾಗ ಅವರಿರುವ ಭೋಗಿಗೆ ಟಿ.ಸಿ. ಯ ಪ್ರವೇಶವಾಯಿತು. ಟಿ.ಸಿ. ಎಲ್ಲಾ ಪ್ರಯಾಣಿಕರ ಟಿಕೇಟು ಪರಿಶೀಲಿಸಿದ ಬಳಿಕ ನಿತ್ಯಾನಂದ ಅವರಲ್ಲಿ ಟಿಕೇಟ್ ವಿಚಾರಿಸಿದರು. ಆದರೆ ಅವರ ಬಳಿ ಟಿಕೇಟ್ ಇಲ್ಲವಾಗಿತ್ತು. ಹಾಗಾಗಿ ಟಿ.ಸಿ ಅವರು ಮುಂದಿನ ನಿಲ್ದಾಣದಲ್ಲಿ ನಿತ್ಯಾನಂದರನ್ನು ಇಳಿಸಿದರು. ಆದರೆ ನಿತ್ಯಾನಂದರು ತಕ್ಷಣ ಮುಂದಿನ ಭೋಗಿಯಲ್ಲಿ ಕುಳಿತುಕೊಂಡರು. ಅಲ್ಲಿಗೆ ಟಿ.ಸಿ ಬಂದಾಗ ಪುನಃ ಅವರ ಕಣ್ಣಿಗೆ ನಿತ್ಯಾನಂದರು ಕಂಡು ಬಂದರು. ಮತ್ತೆ ಅವರನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಿದರು.

ನಿತ್ಯಾನಂದರು ಪ್ಲಾಟ್ ಪಾರ್ಮ್ ಸನಿಹದ ದೀಪಸ್ತಂಭಕ್ಕೆ ಒರಗಿ ನಿಂತುಕೊಂಡರು. ಮುಂದೆ ಹೊರಡಲು ರೈಲು ಗಾಡಿಗೆ ಚಾಲಕ ಚಾಲನೆ ನೀಡಿದ. ಆದರೆ ರೈಲು ಒಂದಿಚ್ಚು ಮುಂದೆ ಚಲಿಸಲಿಲ್ಲ. ರೈಲು ನಿಲ್ದಾಣದಲ್ಲಿ ಇರುವ ದೀಪಸ್ತಂಭಕ್ಕೆ ಒರಗಿನಿಂತ ಮಹಾಪುರಷನಂತೆ ನಿಶ್ಚಲವಾಗಿ ನಿಂತಿತು. ಒಂದಿಷ್ಟು ಅನುಭವಿ ದುರಸ್ಥಿಗಾರರು ಬಂದು ರೈಲು ಯಂತ್ರ ಪರಿಶೀಲಿಸಿದರು.

Advertisement

ಯಂತ್ರ ದೋಷ ಅವರಿಗೆ ಕಂಡು ಬರಲಿಲ್ಲ. ಎಲ್ಲವೂ ಸರಿ ಇರುವುದು ಕಂಡು ಬಂದಿತು. ಆದರೆ ರೈಲು ಚಲಿಸುವುದಿಲ್ಲ. ರೈಲಿನ ಸ್ಥಿತಿ ಕಂಡು ಅವರಿಗೆ ಆಶ್ಚರ್ಯವಾಯಿತು. ರೈಲು ಅಧಿಕಾರಿಗಳಿಗೆ ಯಾರೋ ಹೇಳಿದರಂತೆ.. ‘ರೈಲಿನಿಂದ ಇಳಿಸಲ್ಪಟ್ಟ ಕೌಪಿನಧಾರಿ ಮಹಾಪುರಷನ ಶಕ್ತಿಯಿಂದಲೇ ರೈಲು ಚಲಿಸದೆ ಇರುವುದು ಎಂದು..!!’. ಸಲಹೆಗೆ ಓಗೂಟ್ಟು ಅಧಿಕಾರಿಗಳು ಮತ್ತೆ ನಿತ್ಯಾನಂದರನ್ನು ಬರಮಾಡಿಕೊಂಡು ರೈಲಿನೊಳಗೆ ಕುಳ್ಳರಿಸಿದರು. ನಂತರ ರೈಲು ಮುಂದೆ ಚಲಿಸಿತು. ನಂತರ ಅಲ್ಲಿದ್ದ ಅಧಿಕಾರಿಗಳಿಗೆ ಇತರ ಪ್ರಯಾಣಿಕರಿಗೆ ಅವಧೂತ ನಿತ್ಯಾನಂದ ಬಾಬಾರ ದಿವ್ಯಶಕ್ತಿಯು ಏನೆಂದು ಅರಿವಿಗೆ ಬಂದಿದು. ಈ ಘಟನೆ ಕಣ್ಣಾನೂರಿನಲ್ಲಿ ನಡೆದಿರುವುದೆಂದು ತಿಳಿದು ಬರುತ್ತದೆ.

ಲೇಖಕರ ಪರಿಚಯ

ತಾರಾನಾಥ್ ಮೇಸ್ತ ಶಿರೂರು ಓರ್ವ ಸೃಜನಶೀಲ ವ್ಯಕ್ತಿತ್ವದ ಕವಿ, ಕಥೆಗಾರ, ಅಂಕಣ ಬರಹಗಾರ, ಹವ್ಯಾಸಿ ಪತ್ರಕರ್ತ. ಕನ್ನಡ ನಾಡು ನುಡಿ ಸಂಸ್ಕ್ರತಿಗೆ ಅಪಾರ ಸೇವೆಯನ್ನು ನೀಡುತ್ತಿದ್ದಾರೆ. ತಾಲೂಕು ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಸ್ಪರ್ದೆಗಳಲ್ಲಿ ಬಹುಮಾನ ವಿಜೇತರಾಗಿದ್ದಾರೆ. ಸಾಹಿತ್ಯ ಸೇವೆಯಲ್ಲದೆ ಸಮಾಜಸೇವೆಯಲ್ಲಿಯೂ ನಿರತರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬರುತ್ತಿರುವ ವೃದ್ಧರು, ವೃದ್ಧೆಯರು ಮಹಿಳೆಯರು, ಅನಾಥರು ಹೀಗೆ ಸಾವಿರಕ್ಕೂ ಅಧಿಕ ಅಪರಿಚಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲುಪಡಿಸುವಲ್ಲಿ, ನಿರ್ಗತಿಕರನ್ನು ಅನಾಥಾಶ್ರಮಗಳಲ್ಲಿ ನೆಲೆ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ. ಯಾವುದೇ ಫಲಪೇಕ್ಷೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಹೆರಿಗೆ, ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ರಕ್ತದಾನ, ಹಾಗೂ ಶಿಬಿರಗಳಲ್ಲಿ ನಿರಂತರವಾಗಿ ರಕ್ತದಾನ ಮಾಡುತ್ತ ಬಂದಿದ್ದಾರೆ. ಇದುವರೆಗೆ ಇವರು 48 ಬಾರಿ ರಕ್ತದಾನ ಮಾಡಿರುವುದು ಉಲ್ಲೇಖನಿಯವಾಗಿದೆ. ಅಲ್ಲದೆ ರಕ್ತದಾನದ ಬಗ್ಗೆ ಜನಜಾಗ್ರತಿ ಮಾಡಿದ್ದಾರೆ. ನೇತ್ರದಾನ ಮಾಡಲು ವಾಗ್ಧಾನ ಮಾಡಿದ್ದಾರೆ. 2018 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ, ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಿಗೆ ಹಂತ ಹಂತವಾಗಿ ಪಾದಯಾತ್ರೆಯ ಮೂಲಕ ಸಂಚರಿಸಿ ಮತದಾರರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕರಪತ್ರಗಳ ವಿತರಿಸಿ ಅರಿವು ಮೂಡಿಸಿದ್ದಾರೆ.

  

ಪರಿಸರದ ರಕ್ಷಣೆ, ಜೀವ ವೈವಿದ್ಯತೆಗಳ ರಕ್ಷಣೆ, ಮಹಿಳೆಯರ ರಕ್ಷಣೆ, ಮಕ್ಕಳ ರಕ್ಷಣೆಯಲ್ಲಿಯೂ ಬಹಳವಾಗಿ ಶ್ರಮಿಸಿದ್ದಾರೆ. ಅನಾಥರ ಶವಸಂಸ್ಕಾರವನ್ನು ನಡೆಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮೃತಪಟ್ಟ ವಾರಸುದಾರರು ಇಲ್ಲದ ನೂರಕ್ಕೂ ಅಧಿಕ ಶವಗಳ ಶವಸಂಸ್ಕಾರ ನಡೆಸುವಾಗ, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ನೆರವಾಗಿದ್ದಾರೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾದ ನೂರಾರು ಕೊಳೆತ ಶವಗಳನ್ನು ವೈದ್ಯಕೀಯ ಪರಿಕ್ಷೆಗೆ ಸಾಗಿಸಲು ಪೊಲೀಸ್ ಇಲಾಖೆಗೆ ನೆರವಾಗಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇದರ ಸದಸ್ಯರಾಗಿ, ಪಂಚರತ್ನ ಸೇವಾ ಟ್ರಸ್ಟ್(ರಿ) ಉಡುಪಿ, ಇದರ ಉಪಾಧ್ಯಕ್ಷರಾಗಿ ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇವರು ಸಾಹಿತ್ಯ ಕ್ಷೇತ್ರ- ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯವಾದ ಸೇವೆಯನ್ನು ಗುರುತಿಸಿ ನೂರಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ರಾಜ್ಯ ಮಟ್ಟದ ಪ್ರಶಸ್ತಿ ಗೌರವಗಳು ಇವರಿಗೆ ಹುಡುಕಿಕೊಂಡು ಬಂದಿವೆ.

ತಾರಾನಾಥ್‌ ಮೇಸ್ತ ಅವರಿಗೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2019”, “ವಿಶ್ವಮಾನ್ಯ ಕನ್ನಡಿಗ” ರಾಜ್ಯ ಪ್ರಶಸ್ತಿ,”ಬಸವ ಜ್ಯೋತಿ” ರಾಜ್ಯಪ್ರಶಸ್ತಿ., “ಸದ್ಭಾವನ” ರಾಜ್ಯಪ್ರಶಸ್ತಿ, “ಗಡಿನಾಡ ಧ್ವನಿ” ರಾಜ್ಯ ಪ್ರಶಸ್ತಿ, “ಸೇವಾ ಅಗ್ರಜ” ರಾಜ್ಯ ಪ್ರಶಸ್ತಿ, ಜೇಸಿಐ, “ಸಾಧನಾಶ್ರೀ” ಪ್ರಶಸ್ತಿ, “ಪುಟ್ಟಣ ಕುಲಾಲ್” ಪುರಸ್ಕಾರ, “ಆದಿ ಗ್ರಾಮೋತ್ಸವ” ಯುವ ಸಾಧಕ ಪುರಸ್ಕಾರ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕದ ಪುರಸ್ಕಾರ, ರೆಡ್ ಕ್ರಾಸ್ ರಾಜ್ಯ ಘಟಕದ ಪುರಸ್ಕಾರ ಲಭಿಸಿದೆ.

ಇದೀಗ ಭಗವಾನ್‌ ನಿತ್ಯಾನಂದರ ಕುರಿತಾದ ಅಂಕಣ ಬರಹ ಪ್ರಾರಂಭಿಸಿದ್ದಾರೆ.

LEAVE A REPLY

Please enter your comment!
Please enter your name here