ಕಣಿವೆ ರಾಜ್ಯದಲ್ಲಿ ಮುಂದುವರಿದ ಹಿಂಸಾಚಾರ

0
235

ರಾಷ್ಟ್ರೀಯ ಪ್ರತಿನಿಧಿ ವರದಿ
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದೆ. ಕಾಶ್ಮೀರದಲ್ಲಿ ಸೇನೆಯ ಫೈರಿಂಗ್ ಗೆ ಮತ್ತೆ ಐವರು ದುರ್ಮರಣ ಹೊಂದಿದ್ದಾರೆ.
 
 
ಹಿಂಸಾಚಾರ ನಿಯಂತ್ರಿಸಲು ಸೇನಾ ಪಡೆ ಫೈರಿಂಗ್ ನಡೆಸಿದೆ. ಬದ್ಧಗಾಂವ್ ನಲ್ಲಿ ನಾಲ್ವರು ಮತ್ತು ಅನಂತನಾಗ್ ನಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಈವರೆಗೆ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 65ಕ್ಕೇರಿದೆ.
 
 
ಇಂದು ಬದಗಾಮ್ ಜಿಲ್ಲೆಯ ಮಗಮ್ ಪ್ರದೇಶದಲ್ಲಿ ಸೇನಾ ಸಿಬ್ಬಂದಿಗಳತ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಸೈನಿಕರು ಅವರನ್ನು ನಿಯಂತ್ರಿಸಲು ಲಾಠಿಚಾರ್ಜ್ ನಡೆಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ನೋಡ ನೋಡುತ್ತಿದ್ದಂತೆಯೇ ಪ್ರತಿಭಟನಾಕಾರರು ಸೇನಾ ಸಿಬ್ಬಂದಿಗಳ ಮೇಲೆ ಕಲ್ಲೂ ತೂರಾಟ ಹೆಚ್ಚಿಸಿದಾಗ ಬೇರೆ ದಾರಿಯಿಲ್ಲದೇ ಗುಂಡು ಹಾರಿಸಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here