ಕಣಿಲೆ ಸಾಂಬಾರು

0
298

ರುಚಿಗೊಂದಿಷ್ಟು ಕಣಿಲೆಯ ವ್ಯಂಜನಗಳು
ಬೇಕಾಗುವ ಸಾಮಾಗ್ರಿಗಳು
ಕಣಿಲೆ ತುಂಡು ಒಂದು ಕಾಲು ಕೆ.ಜಿ., ಕೊತ್ತಂಬರಿ 3 ಚಮಚ, ಜೀರಿಗೆ 1/4 ಚಮಚ, ಮೆಂತೆ ನಾಲ್ಕಾರು ಕಾಳುಗಳು, ತೊಗರಿಬೇಳೆ 1/2 ಕಪ್, ತೆಂಗಿನತುರಿ 1 ಕಪ್, ಉಪ್ಪು, ಹುಳಿನೆಲ್ಲಿಕಾಯಿ ಗಾತ್ರ, ಬೆಲ್ಲ ಹುಳಿಗಿಂತ ತುಸು ಹೆಚ್ಚು, ಕುಮ್ಟೆ ಮೆಣಸು 6, ಚಿಟಿಕೆ ಅರಸಿನಹುಡಿ.
 
 
ಮಾಡುವ ವಿಧಾನ:
ಕಣಿಲೆಯನ್ನು ದೊಡ್ಡ ದೊಡ್ಡ ಹೋಳುಗಳಾಗಿ ಹೆಚ್ಚಿ ಬೇಯಿಸಿ ನೀರು ತೆಗೆಯಿರಿ. ತೊಗರೀಬೇಳೆಯನ್ನು ಬೇಯಿಸಿ, ಅದಕ್ಕೆ ಹೋಳುಗಳಾಗಿ ಹಾಕಿ, ಉಪ್ಪು, ಹುಳಿ, ಬೆಲ್ಲ ಅರಸಿನಹುಡಿ ಹಾಕಿ ತುಸು ಹೆಚ್ಚು ಹೊತ್ತು ಬೇಯಲು ಇಡಿ. ಸಾಂಬಾರ ಪದಾರ್ಥಗಳನ್ನು ಹರಿದು ತೆಂಗಿನ ತುರಿಯೊಂದಿಗೆ ನುಣ್ಣನೆ ರುಬ್ಬಿ ಬೆಂದ ಹೋಳಿನೊಂದಿಗೆ ಸೇರಿಸಿಕುದಿಸಿ ಒಗ್ಗರಣೆ ಕೊಡಿ.
 
ಸುಮತಿ ಕೆ.ಸಿ.ಭಟ್ ಆದೂರು

LEAVE A REPLY

Please enter your comment!
Please enter your name here