ಕಡವೆ ಬೇಟೆಯಾಡಿದವರ ಬಂಧನ

0
414

ಚಿಕ್ಕಮಗಳೂರು ಪ್ರತಿನಿಧಿ ವರದಿ
12 ಜನರ ತಂಡ ಎರಡು ಕಡವೆಗಳನ್ನು ಬೇಟೆಯಾಡಿ ಹತ್ಯೆಗೈದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲೂಕಿನ ಬೆತ್ತಿಚೌಕ ಬಳಿ ಸಂಭವಿಸಿದೆ. ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ.
 
 
 
ಶಾರ್ಟ್ ಶೂಟರ್ ಸೇರಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಬೆತ್ತಿಚೌಕ ಬಳಿ 11 ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಹೊಸವರ್ಷ ಆಚರಣೆಗೆಂದು ಬೆತ್ತಿಚೌಕಕ್ಕೆ ಬಂದಿದ್ದ ಪ್ರವಾಸಿಗರ ತಂಡ 1 ಹೆಣ್ಣು ಮತ್ತು 1 ಗಂಡು ಕಡವೆಯನ್ನು ಬೇಟೆಯಾಡ ಹತ್ಯೆ ಮಾಡಿದ್ದಾರೆ.
 
 
 
ಶಾರ್ಪ್ ಶೂಟರ್ ಸಮೀರ್(29) ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಾಪತ್ತೆಯಾದ ಪ್ರಮುಖ ಆರೋಪಿ ರಫೀಕ್ ಗೆ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತ 11 ಜನರ ಪೈಕಿ ಬಹುತೇಕರು ಇಂಜಿನಿಯರ್ ಗಳಾಗಿದ್ದಾರೆ. ಬಹುತೇಕರು ಬೆಂಗಳೂರು ಪ್ರತಿಷ್ಠಿತ ಕಂಪನಿ ನೌಕರರಾಗಿದ್ದಾರೆ. ಈ ತಂಡ ಕಡವೆಗಳನ್ನು ಬೇಟೆಯಾಗಿ ಬರುವಾಗ ಅರಣ್ಯಸಿಬ್ಬಂದಿಗಳ ಕೈಗೆ ಸಿಕ್ಕಿಬಿದ್ದಿದೆ. ನಿನ್ನೆ ರಾತ್ರಿಯೇ ಆರೋಪಿಗಳು ತರೀಕೆರೆ ಜೆಎಂಎಫ್ ಸಿ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಜಡ್ಜ್ 11 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

LEAVE A REPLY

Please enter your comment!
Please enter your name here