ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು:
1 ಚಮಚ ಕಡಲೆಕಾಯಿ (ಹುರಿದು ಸಿಪ್ಪೆ ತೆಗೆದು ನುಚ್ಚಿನಂತೆ ಪುಡಿಮಾಡಿ, 1 ಕಪ್ ಮೊಸರು, 1/2 ಕಪ್ ಕರಿಬೇವು, 1/2 ಚಮಚ ಸಕ್ಕರೆ ಪುಡಿ, 1 ಕತ್ತರಿಸಿದ ಹಸಿ ಮೆಣಸಿನಕಾಯಿ, 1 ಚಮಚ ಕೊತ್ತಂಬರಿ ಸೊಪ್ಪು, 1 ಎಣ್ಣೆ, ಉಪ್ಪು, ಸಾಸಿವೆ, 1 ಚಮಚ ಗೋಡಂಬಿ.
ತಯಾರಿಸುವ ವಿಧಾನ:
ಮೊಸರನ್ನು ತೆಳ್ಳಗಾಗುವವರೆಗೂ ಕದಡಿಸಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಗೋಡಂಬಿ ಕರಿಬೇವಿನ ಎಲೆ ಹಾಕಿ ಹುರಿದು ಒಂದೆಡೆ ಇಡಬೇಕು.ಇದಕ್ಕೆ ಕತ್ತರಿಸಿದ ಹಸಿರು ಮೆಣಸಿನ ಕಾಯಿ, ಹುರಿದ ಕಡಲೆಕಾಯಿ ನುಚ್ಚು, ಕೊತ್ತಂಬರಿ, ಸಕ್ಕರೆ, ಉಪ್ಪು ಬೆರೆಸಿ ಚೆನ್ನಾಗಿ ತಿರುಗಿಸಬೇಕು. ಇವೆಲ್ಲವನ್ನೂ ಮೊಸರಿಗೆ ಬೆರೆಸಿ ಚೆನ್ನಾಗಿ ತಿರುಗಿಸಿದರೆ ಫರಾಲ್ ನೆಂಚಿಕೊಂಡು ತಿನ್ನಲು ರೆಡಿಯಾಗಿರುತ್ತೆ.