ಕಟ್ಟಡ ಕುಸಿತ

0
359

ರಾಷ್ಟ್ರೀಯ ಪ್ರತಿನಿಧಿ ವರದಿ
ಜನವಸತಿ ಕಟ್ಟಡವೊಂದು ಕುಸಿದಿದ್ದು, ಕಟ್ಟದಲ್ಲಿದ್ದವರ ಪೈಕಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹೈದರಾಬಾದ್ ನ ನಾನಕರಾಂಗೂಡ ಪ್ರದೇಶದಲ್ಲಿ ಸಂಭವಿಸಿದೆ.
 
 
 
ಜನವಸತಿ ಪ್ರದೇಶದಲ್ಲಿರುವ 7 ಅಂತಸ್ತಿನ ಅಪಾರ್ಟ್ ಮೆಂಟ್ ಕುಸಿದಿದ್ದು, ಕಟ್ಟಡ ಕುಸಿತದ ವೇಳೆ ಸುಮಾರು 10 ಹೆಚ್ಚು ಮಂದಿ ಕಟ್ಟಡದಲ್ಲಿದ್ದರು ಎಂದು ಹೇಳಲಾಗುತ್ತಿದೆ. ವಿಚಾರ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ವಿಶೇಷ ಕಾರ್ಯಾಚರಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಇಬ್ಬರ ಶವದೊರೆತಿದ್ದು, ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here