ಕಟ್ಟಡದಲ್ಲಿ ಅಗ್ನಿ ದುರಂತ

0
280

ರಾಷ್ಟ್ರೀಯ ಪ್ರತಿನಿಧಿ ವರದಿ
ಮುಂಬೈನಲ್ಲಿ ಭಾರಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದೆ. ನಾರಿಮನ್ ಪಾಯಿಂಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.
 
 
ಇಂದು ಮುಂಜಾನೆ ಮುಂಬೈನ ಕೆಫೆ ಪರೇಡ್ ಬಳಿಯಿರುವ 20 ಮಹಡಿ ಕಟ್ಟಡದ ಇಪ್ಪತ್ತನೇ ಮಹಡಿಯಲ್ಲಿ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಸಿಬ್ಬಂದಿಗಳು ಬೆಂಕಿನಂದಿಸುವ ಕಾರ್ಯ ನಡೆಸುತ್ತಿದ್ದಾರೆ.
 
 
ಬೆಂಕಿಯ ಜ್ವಾಲೆ ನಿಯಂತ್ರಕ್ಕೆ ಬಾರದೇ ಧಗಧಗನೆ ಹೊತ್ತಿ ಉರಿಯುತ್ತಿದೆ. ಬೆಂಕಿಯ ಕೆನ್ನಾಲಿಗಿಗೆ ಅಕ್ಕಪಕ್ಕದ ಎರಡು ಆಪಾರ್ಟ್ ಮೆಂಟ್ ಗಳು ಸಂಪೂರ್ಣ ಸುಟ್ಟುಹೋಗಿದ್ದು, ಒಳಗಿದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
 
 
ಬಜಾಜ್ ಎಲೆಕ್ಟ್ಕಿಕಲ್ಸ್ ಸಂಸ್ಥೆಯ ಮುಖ್ಯಸ್ಥ ಶೇಖರ್ ಬಜಾಜ್ ಅವರಿಗೆ ಸೇರಿದ ಆಪಾರ್ಟ್ ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here