ಕಟೌಟ್ ಗೆ ಬಸ್ ಡಿಕ್ಕಿ

0
460

ಬೆಂಗಳೂರು ಪ್ರತಿನಿಧಿ ವರದಿ
ರಸ್ತೆ ಬದಿ ಹಾಕಿದ್ದ ಕಟೌಟ್ ಗೆ ಖಾಸಗಿ ಬಸ್ ಡಿಕ್ಕಿಯಾದ ಘಟನೆ ನಗರದ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಬಸ್ ಡಿಕ್ಕಿಯಾದ ಪರಿಣಾಮ ಬೃಹತ್ ಕಟೌಟ್ ಏಕಾಏಕಿ ಕಾರಿನ ಮೇಲೆ ಬಿದ್ದಿದೆ.
 
 
ಕಟೌಟ್ ಬಿದ್ದ ಹಿನ್ನೆಲೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂ ಆಗಿದೆ. ಜಬ್ಬರ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ಕಟೌಟ್ ಗೆ ಡಿಕ್ಕಿಯಾಗಿದೆ. ಫ್ಲೆಕ್ಸ್ ಆರ್ಚ್ ಮಾದರಿಯಲ್ಲಿ ಕಬ್ಬಿಣದಿಂದ ಮಾಡಿದ್ದಾಗಿತ್ತು. ಬಸವನಗುಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
 
 
 
ಯಾವುದೇ ಸಪೋರ್ಟ್ ಇಲ್ಲದೆ ಕಟೌಟ್ ಹಾಕಲಾಗಿತ್ತು. ಮಹಬಲೇಶ್ ಎಂಬುವವರಿಗೆ ಸೇರಿದ ಕಾರು ಜಖಂ ಆಗಿದೆ. ಬಸವನಗುಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here