ಕಟೀಲ್ದಪ್ಪೆಯನ್ನು ನಿಂದಿಸಿದವರ ವಿರುದ್ಧ ಹೋರಾಟ ಅಗತ್ಯ

0
274

ನಮ್ಮ ಪ್ರತಿನಿಧಿ ವರದಿ
ವಿಭಜಿತ ದ.ಕ. ಜಿಲ್ಲೆಯಲ್ಲಿ ಕಟೀಲು ಶ್ರೀ ಅಮ್ಮನವರನ್ನು ದುರ್ಗಾ ಪರಮೇಶ್ವರಿಗಿಂತ ಕಟೀಲ್ದಪ್ಪೆ ಎನ್ನುವ ರೀತಿಯಲ್ಲಿ ತಮ್ಮ ಸ್ವಂತ ಆಮ್ಮನಿಗಿಂತ ಹೆಚ್ಚು ಮಹತ್ವವನ್ನು ನೀಡುತ್ತಿದ್ದು, ಅಂತಹ ಅಮ್ಮನ ಬಗ್ಗೆ ಅತ್ಯಂತ ಕೆಟ್ಟ ಭಾಷೆಯನ್ನು ಪ್ರಯೋಗಿಸಿ ನಿಂದನೆಯ ವಿರುದ್ಧ ಹೋರಾಟ ನಡೆಸದಿದ್ದರೆ ಅರ್ಥ ಶೂನ್ಯ, ಮತ್ತು ಹುಟ್ಟಿ ಪ್ರಯೋಜನವಿಲ್ಲದಂತೆ ಈ ನಿಟ್ಟಿನಲ್ಲಿ ಈವಿಚಾರದಲ್ಲಿ ಒಂದಗಿ ಪ್ರತಿಭಟಿಸಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅನಂತಪದ್ಮನಾಭ ಅಸ್ರಣ್ಣ ಅಭಿಪ್ರಾಯಪಟ್ಟರು.
 
kateel_asrana1
ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಭಕ್ತರು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನದಲ್ಲಿ  ಹಮ್ಮಿಕೊಂಡಿದ್ದ ಶ್ರೀ ಕಟೀಲು ದೇವರ ಮೇಲೆ ಅವಹೇಳನ ಮಾಡಿರುವ ಬಗ್ಗೆ ಧಾರ್ಮಿಕ ಜಾಗೃತಿ ಮತ್ತು ಖಂಡನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
 
ನಮ್ಮ ದೇಶದಲ್ಲಿದ್ದು ಕೊಂಡು ಆ ದೇಶದ ಸಂಸ್ಕೃತಿಯ ವಿರುದ್ಧ ನಿಂದನಾತ್ಮಕ ಬರಗಳನ್ನು ಹಾಕುವುದು ಸಲ್ಲದು . ಅನಾದಿ ಕಾಲದಿಂದಲೂ ಶ್ರೀ ಅಮ್ಮನವರಿಗೆ ನಮ್ಮ ಸ್ವಂತ ಅಮ್ಮನಷ್ಟು ಪ್ರಾತಿನಿಧ್ಯ ಕೊಡುತ್ತೇವವೆ. ಅಂತಹ ಆಮ್ಮನಿಗೆ ಅವಹೇಳನಕಾರಿಯಾಗಿ ಬರೆಯುವ ಮೂಲಕ ಧರ್ಮವನ್ನು ಉರಿಸುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಹೋರಾಡದೇ ಇದ್ದಲ್ಲಿ ಅರ್ಥ ಶೂನ್ಯ ಈ ವಿಚಾರದಲ್ಲಿ ಪ್ರತಿಭಟಿಸದೇ ಇದ್ದಲ್ಲಿ ಧರ್ಮ ಉಳಿಯಲು ಸಾಧ್ಯವಿಲ್ಲ. ತಪ್ಪಿನ ಅರಿವು ಲೋಕಕ್ಕೆ ತಿಳಿಸುವ ಕೆಲಸ ಆಗಬೇಕಿದೆ ಎಂದ ಅವರು ಈ ಜಿಲ್ಲೆಯಲ್ಲಿ ಎಲ್ಲಾ ಧರ್ಮದವರು ಎಲ್ಲಾ ಧರ್ಮದವರ ಆರಧನ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ಶ್ರೀ ಕ್ಷೇತ್ರ ಕಟೀಲಿಗೆ ಮುಸ್ಲಿಂ, ಕ್ರಿಶ್ಚಿಯನ್ನರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಸಮಾರಸ್ಯದ ಕ್ಷೇತ್ರವೆನಿಸಿರುವ ಕಟೀಲಿನ ಹೆಸರಿಗೆ ಅಪಾರ ಗೌರವ ಇದೆ. ಒಂದು ಸಮುದಾಯದಲ್ಲಿ ಇಂತಹ ದುರ್ಬುದ್ಧಿಯವರಿಂದ ಇಡೀ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದ್ದು, ಇಂತವರನ್ನು ಸಮಾಜದಿಂದ ಹೊರ ಹಾಕುವ ಕಾರ್ಯ ಎಂದರು.
 
ಭಾವುಕರಾಗಿ ಅತ್ತ ಅಸ್ರಣ್ಣರು : ಕಾರ್ಯಕ್ರಮದುದ್ದಕ್ಕೂ ಬಾವುಕರಾಗಿಯೇ ಇದ್ದ ಅಸ್ರಣ್ಣ, ಭಾಷಣದ ಪ್ರಾರಂಭದಿಂದಲೇ ಭಾವುಕರಾಗಿದ್ದರು. ನನಗೆ ಭಕ್ತರೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಶ್ರೀ ಅಮ್ಮನವರ ಬಗ್ಗೆ ಬರೆದದ್ದನ್ನು ತೋರಿಸಿದರು. ಆದನ್ನು ನೋಡಿ ಮನಸ್ಸಿಗೆ ತುಂಬಾ ಆಘಾತವಾಯಿತು. ಇಂತಹ ಕೃತ್ಯವನ್ನು ಎಂದಿಗೂ ಸಹಿಸಲಾಗದು ಅನ್ನುತ್ತಾ ಎಲ್ಲರಿಗೂ ಕ್ಷೇತ್ರದ ದೇವಿಯ ಅನುಗ್ರಹವಿರಲಿ ಎಂದ ಅವರು ಮಗುವಿಗೆ ನೋವಾಗದಂತೆ ನೋಡುವ ಪ್ರತೀತಿಯುಳ್ಳ ತಾಯಿಯನ್ನು ಇಂತಹ ನೀಚ ದೃಷ್ಟಿಯಿಂದ ನೋಡಿರುವುದು ವೈಯಕ್ತಿಕವಾಗಿ ತುಂಬಾ ಆಘಾತವನ್ನು ತಂದಿದೆ ಎಂದು ಬಿಕ್ಕಿ ಬಿಕ್ಕಿ ಅತ್ತರು.
 
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಸಂದೀಪ್ ಶೆಟ್ಟಿ ಮರವೂರು, ಉಳ್ಳಾಲ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಕೊಲ್ಯ ನಾಗಬ್ರಹ್ಮಸ್ಥಾನದ ಧರ್ಮದರ್ಶಿ ಭಾಸ್ಕರ್ ಐತಾಳ್, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ಎ.ಜೆ.ಶೇಖರ್, ಲಕ್ಷ್ಮೀ ನರಸಿಂಹ ದೇವಸ್ಥಾನದ ಮೊಕ್ತೇಸರ ಶ್ರೀಕರ ಕಿಣಿ, ಕೊಲ್ಯ ಶಾರದ ಉತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಬಂಗೇರ, ಕೊಲ್ಯ ನಾಗಬ್ರಹ್ಮ ಸ್ಥಾನದ ಅಧ್ಯಕ್ಷ ಸುಶಾಂತ್ ಭಂಡಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್, ಜೈವೀರ ಮಾರುತಿ ವ್ಯಾಯಾಮ ಶಾಲೆಯ ವಿಠಲ ಶ್ರೀಯಾನ್, ಆಲಿಚಾಮುಂಡೇಶ್ವರಿ ದೈವಸ್ಥಾನದ ಅಧ್ಯಕ್ಷ ಮಾಧವ ಬಗಂಬಿಲ, ಉಳಿಯ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಎಸ್.ಪ್ರಕಾಶ್ ಮೊಕ್ತೇಸರರು, ಕುತ್ತಾರು ಶ್ರೀರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಮಾಜಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಉಳ್ಳಾಲ್, ಉಳ್ಳಾಲ ವಲಯ ಬಮಟರ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಹರೇಕಳ, ಹರೀಶ್ ಕುತ್ತಾರ್, ಕುಂಪಲ ಬಾಲಕೃಷ್ಣ ಮಂದಿರದ ಎಸ್.ಎಸ್. ನಾಕ್, ದಯಾನಂದ ತೊಕ್ಕೊಟ್ಟು, ರಮೇಶ್ ಕೊಂಡಾಣ, ಗಣೇಶ್ ಕಾಪಿಕಾಡು, ಹರೀಶ್ ಅಂಬ್ಲಮೊಗರು, ಪುರುಷೋತ್ತಮ ಕಲ್ಲಾಪು, ಆನಂದ ಶೆಟ್ಟಿ, ಹಿತೇಶ್ ಉಳ್ಳಾಲಬೈಲ್, ಪ್ರೇಮನಾಥ್ ಪುತ್ರನ್, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಶೆಟ್ಟಿ ದಡಸ್ ಉಪಸ್ಥಿತರಿದ್ದರು.
ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಜೀವನ್ ತೊಕ್ಕೊಟ್ಟು ಸ್ವಾಗತಿಸಿದರು. ಕುಮುದಾ ಅಡಪ್ಪ ಕುಂಪಲ ಖಂಡನಾ ನಿರ್ಣಯ ಮಂಡಿಸಿದರು.

LEAVE A REPLY

Please enter your comment!
Please enter your name here