ಕಕ್ಷೆಗೆ ಚಿಮ್ಮಿದ ಕೊನೆಯ ಉಪಗ್ರಹ

0
221

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಹ್ಯಾಕಾಶ ಸಂಸ್ಥೆ ಇಸ್ರೋದಿಂದ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಐಆರ್ ಎನ್ ಎಸ್ ಎಸ್-1ಜಿ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.
 
 
ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಉಪಗ್ರಹ ಹೊತ್ತು ಪಿಎಸ್ ಎಲ್ ವಿ-ಸಿ33 ನಭಕ್ಕೆ ಹಾರಿದೆ. ಈ ಉಪಗ್ರಹ ಪ್ರಾದೇಶಿಕ ಮಾರ್ಗಸೂಚಿಗೆ ನೆರವಾಗಲಿದೆ.
 
ಸ್ವದೇಶಿ ಪಥ ದಿಕ್ಸೂಚಿ ಸಂವಹನ (ನ್ಯಾವಿಗೇಷನ್) ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಇಂದು ಅಂತಿಮ ಹೆಜ್ಜೆ ಇಟ್ಟಿದೆ. ಭಾರತೀಯ ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 7ನೇ ಮತ್ತು ಅಂತಿಮ ಉಪಗ್ರಹವಾಗಿದೆ. ಈ ಹಿಂದೆ ಉಡಾಯಿಸಲಾಗಿರುವ ಉಪಗ್ರಹಗಳ ಜತೆ ಕಾರ್ಯ ನಡೆಸಲಿದೆ.
 
 
 
IRBSS 1ಎ, ಎಬಿ, 1ಸಿ, 1ಡಿ, 1ಇ, 1ಎಫ್ ಸೇರಿ 6 ಉಪಗ್ರಹಗಳು ಈಗಾಗಲೇ ಉಡಾವಣೆ ಯಶಸ್ವಿಯಾಗಿದ್ದು, ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿವೆ. ಈಗ ಕೊನೇ ಉಪಗ್ರಹವು ಕಕ್ಷೆಗೆ ಚಿಮ್ಮಿದೆ.
 
 
 
ಉಪಗ್ರಹಗಳು ಭಾರತ ಮತ್ತು ಸುತ್ತಮುತ್ತಲಿನ 1500 ಕಿ.ಮೀ. ಪ್ರದೇಶದಲ್ಲಿ ಕಾರ್ಯ ನಿರ್ವಹಣೆ ವ್ಯಾಪ್ತಿ ಹೊಂದಿವೆ. ಭೂಮಾರ್ಗದಲ್ಲಿ ಸಾಗುವ ವಾಹನಗಳು, ವಿಮಾನಗಳು ಮತ್ತು ಹಡಗುಗಳು ಮತ್ತು ದೋಣಿಗಳಿಗೆ ಯಾನದಲ್ಲಿ ಪಥ ದಿಕ್ಸೂಚಿ ವ್ಯವಸ್ಥೆಗೆ ನೆರವಾಗುವುದಲ್ಲದೆ ಎಲ್ಲ ಬಗೆಯ ಚಲನವಲನಗಳ ಮೇಲೂ ನಿಗಾ ಇಟ್ಟಿರುತ್ತದೆ. ಹಡಗು, ದೋಣಿಗಳು, ವಿಮಾನಗಳು ನಿಗದಿತ ಗುರಿ ತಲುಪಲು ನೆರವಾಗುತ್ತವೆ. ಜಿಪಿಎಸ್​ಗಿಂತಲೂ ಪರಿಣಾಮಕಾರಿ ನ್ಯಾವಿಗೇಷನ್ ವ್ಯವಸ್ಥೆ ಇದಾಗಿದೆ.
 
 
ಉಪಗ್ರಹಗಳ ಬಳಕೆ
ದಿಕ್ಸೂಚಿ ಉಪಗ್ರಹಗಳು ಹಲವು ರೀತಿಯಲ್ಲಿ ಬಳಕೆಯಾಗಲಿದೆ. ಭೂಮಿ, ಆಕಾಶ ಮತ್ತು ಸಮುದ್ರದಲ್ಲಿ ಪಥ ದಿಕ್ಸೂಚಿ, ಅವಘಡ ನಿರ್ವಹಣೆ ವಾಹನಗಳ ಜಾಡು ಹಿಡಿಯುವುದು ಮತ್ತು ತುಕಡಿಗಳ ನಿರ್ವಹಣೆ ಮೊಬೈಲ್ ಫೋನ್​ನೊಂದಿಗೆ ಏಕೀಕರಿಸುವುದು, ಮ್ಯಾಪಿಂಗ್ ಮತ್ತು ಭೂಮಿತಿಯ ಮಾಹಿತಿ ಸಂಗ್ರಹಿಸಲು ಮತ್ತುಭೂ ಮಾರ್ಗದಲ್ಲಿ ಚಲಿಸುವ ವಾಹನಗಳ ಚಾಲಕರಿಗೆ ದೃಶ್ಯ ಮತ್ತು ಧ್ವನಿಯ ಪಥ ದಿಕ್ಸೂಚಿ ಮಾಹಿತಿ ತಿಳಿಯಲು ಬಳಕೆಯಾಗಲಿದೆ.

LEAVE A REPLY

Please enter your comment!
Please enter your name here