ಕಂಬಳಕ್ಕೆ ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್

0
398

ಬೆಂಗಳೂರು ಪ್ರತಿನಿಧಿ ವರದಿ
ಕಂಬಳ ಕ್ರೀಡೆಗೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ವಿಧಾನಸಭೆಯಲ್ಲಿ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಿದೆ. ಪ್ರಾಣಿಗಳ ಹಿಂಸೆ ತಡೆ ಕಾಯ್ದೆಯಲ್ಲಿ 2 ಕ್ರೀಡೆಗಳಿಗೆ ಅವಕಾಶ ನೀಡಲಾಗಿದೆ. ಕಾಯ್ದೆಯಲ್ಲಿ ಕಂಬಳ, ಎತ್ತಿನಗಾಡಿ ಓಟದ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.
 
 
ಕರ್ನಾಟಕದಲ್ಲಿ 2 ಕ್ರೀಡೆ ಗಳಿಗೂ ವಿನಾಯಿತಿ ನೀಡಲಾಗಿದೆ. ಪ್ರಾಣಿಗಳ ಉಸ್ತುವಾರಿ ಹೊತ್ತವರು ನೋವು ಮಾಡಬಾರದು. ಅನಗತ್ಯವಾಗಿ ನೋವು, ಸಂಕಟ ಉಂಟುಮಾಡದಂತೆ ಷರತ್ತು ವಿಧಿಸಲಾಗಿದೆ. ಕೋಣಗಳ ದೇಶಿತಳಿ ಸಂಪ್ರದಾಯ, ಸಂಸ್ಕೃತಿಗೆ ಒತ್ತು ನೀಡಿ ವಿಧೇಯಕದನ್ವಯ ಕಂಬಳ ನಡೆಸಲು ಅವಕಾಶ ನೀಡಲಾಗಿದೆ.
 
ಬೀದಿ ನಾಯಿಗಳನ್ನು ವಧೆ ಮಾಡುವಂತಿಲ್ಲ:
ಪ್ರಾಣಿಯನ್ನು ನಿರ್ವೀರ್ಯಗೊಳಿಸುವಂತಿಲ್ಲ. ಯಾವುದೇ ಪ್ರಾಣಿಗಳಿಗೂ ಬರೆ ಹಾಕುವಂತಿಲ್ಲ ಎಮದು ಮಸೂದೆಯಲ್ಲಿ ಹೇಳಲಾಗಿದೆ. ಅಷ್ಟೆ ಅಲ್ಲದೆ ಪ್ರಾಣಿಗಳಿಗೆ ಮೂಗುದಾರ ಹಾಕಲು ಮಸೂದೆ ನಿರ್ಬಂಧ ವಿಧಿಸಿದೆ. ಇವುಗಳ ಜತೆಯಲ್ಲಿ ಬೀದಿ ನಾಯಿಗಳನ್ನು ವಧೆ ಮಾಡುವುದಕ್ಕೂ ಸರಕಾರ ನಿಷೇಧ ಹೇರಿದೆ.
 
 
ವಿಧಾನಸಭೆಯಲ್ಲಿ ಮೂರು ಮಹತ್ವದ ತಿದ್ದುಪಡಿ ವಿಧೇಯಕಗಳ ಮಂಡನೆಯಾಗಿದೆ. ಕಂಬಳಕ್ಕೆ ಅನುಕೂಲ ಮಾಡಿಕೊಡುವಂತೆ ಪ್ರಾಣಿಗಳ ಹಿಂಸಾಚಾರ ತಡೆಗಟ್ಟುವ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ.
 
 
 
ಪ್ರಾಣಿ ಹಿಂಸೆ ತಡೆ ಕಾಯ್ದೆಯ ತಿದ್ದುಪಡಿ ವಿಧೇಯಕ 2017ನ್ನು ಪಶುಸಂಗೋಪನಾ ಸಚಿವ ಎ. ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಇದರಿಂದ ಕಂಬಳಪರ ಹೋರಾಟಗಾರರಿಗೆ ಫಲ ಸಿಕ್ಕಾಂತಾಗಿದೆ.

LEAVE A REPLY

Please enter your comment!
Please enter your name here