ಕಂಬಳಕ್ಕಾಗಿ ಬೃಹತ್ ಹೋರಾಟ

0
600

ಮಂಗಳೂರು ಪ್ರತಿನಿಧಿ ವರದಿ
ಕಂಬಳಕ್ಕಾಗಿ ಹೋರಾಟ ಮುಂದುವರಿದಿದ್ದು, ಕಂಬಳ ಮೇಲಿನ ತಡೆ ತೆರವಿಗೆ ಆಗ್ರಹಿಸಿ ಮಂಗಳೂರಿನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ. ಮಂಗಳೂರಿನ ವಿದ್ಯಾರ್ಥಿಗಳು ಕರಾವಳಿ ಕ್ರೀಡೆ ಕಂಬಳಕ್ಕಾಗಿ ಬೀದಿಗಿಳಿದಿದ್ದಾರೆ.
 
 
 
ಮಂಗಳೂರಿನ ಹಂಪನಕಟ್ಟೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ತುಳುರಂಗದ ನಟ ನವೀನ್ ಪಡೀಲ್ ಸೇರಿ ತುಳು ಚಿತ್ರ ಕಲಾವಿದರು ಕಂಬಳ ಪ್ರೇಮಿಗಳು, ವಿದ್ಯಾರ್ಥಿಗಳು, ನೂರಾರು ಸಾರ್ವಜನಿಕರು, ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆ.
 
 
ಕಂಬಳ ಗ್ರಾಮೀಣ ಭಾಗದ ಕ್ರೀಡೆ ಮಾತ್ರ. ನಾವು ಕಂಬಳ ಪರವಾಗಿದ್ದೇವೆ, ಕಂಬಳ ವಿರೋಧಿಗಳಲ್ಲ. ಕಂಬಳ ಕ್ರೀಡೆಗೆ ಅಗತ್ಯ ಬಿದ್ದರೆ ಕಾನೂನು ತರಲಾಗುವುದು. ಎಂದು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here