ಕಂಟೈನರ್ ಗೆ ಕಾರು ಡಿಕ್ಕಿ: 5 ಸಾವು

0
198

 
ಬೆಂಗಳೂರು ಪ್ರತಿನಿಧಿ ವರದಿ
ನಿಂತಿದ್ದ ಕಂಟೈನರ್ ಗೆ ಶಿಫ್ಟ್ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ಐವರು ದುರ್ಮರಣ ಹೊಂದಿದ್ದ ಘಟನೆ ನೆಲಮಂಗಲದ ಕೆಂಪೋಹಳ್ಳಿ ಗೇಟ್ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
 
 
 
ಭೀಕರ ಅಪಘಾತದಲ್ಲಿ ಕಾರು ಚಾಲಕ ಮತ್ತು ಒಂದೇ ಕುಟುಂಬದ ನಾಲ್ವರು ಜನ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಗದಗ ಜಿಲ್ಲೆಯ ನರಗುಂದ ನಿವಾಸಿಗಳಾಗಿದ್ದಾರೆ. ಅಪಘಾತವಾದ ಕಾರು ತುಮಕೂರುನಿಂದ ಬೆಂಗಳೂರಿಗೆ ಬರುತ್ತಿತ್ತು.
 
 
 
ಅಪಘಾತದಲ್ಲಿ ಕಾರು ಚಾಲಕ ಮಲ್ಲಪ್ಪ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಟಿಎಂಡಿಸಿ ಬಸ್ ಚಾಲಕ ಬಾಬಣ್ಣ, ಪತ್ನಿ ರತ್ನಮ್ಮ ಸೇರಿ ಬಾಲಕಿ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಬಾಬಣ್ಣರ ತಾಯಿ ಮೃತಪಟ್ಟಿದ್ದರು. ತಾಯಿ ಕಾರ್ಯ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
 
 
 
ಘಟನೆಯಲ್ಲಿ ಶಿಫ್ಟ್ ಕಾರಿನಲ್ಲಿದ್ದ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
 
 
 
ಅಪಘಾತಕ್ಕೆ ಕಾರಿನ ಅತಿವೇಗವೇ ಕಾರಣ ಎಂದು ಹೇಳಲಾಗುತ್ತಿದ್ದು, ವೇಗವಾಗಿ ಬಂದ ಕಾರನ್ನು ನಿಯಂತ್ರಿಸಲಾಗದೇ ಚಾಲಕ ಕಂಟೇನರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here