ಓರ್ವ ನಟನ ಶವ ಪತ್ತೆ

0
429

ಬೆಂಗಳೂರು ಪ್ರತಿನಿಧಿ ವರದಿ
ಹೆಲಿಕಾಪ್ಟರ್ ನಿಂದ ಜಿಗಿದು ನಟರಿಬ್ಬರ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಓರ್ವ ನಟನ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನ ತಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಒಂದು ಶವ ಪತ್ತೆಯಾಗಿದೆ.
 
 
ಮೃತ ಖಳನಟ ಉದಯ್ ಶವ ಪತ್ತೆಯಾಗಿದೆ. ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಾಯಕರಿಬ್ಬರು ನೀರುಪಾಲಾಗಿದ್ದರು. ಎರಡು ದಿನದ ಬಳಿಕ ಡ್ಯಾಂನಲ್ಲಿ ಓರ್ವ ನಟನ ಶವ ಪತ್ತೆಯಾಗಿದೆ. ಉದಯ್ ಬಿದ್ದಿದ್ದ ಜಾಗದಿಂದ 20 ಮೀ. ದೂರದಲ್ಲಿ ಶವ ಪತ್ತೆಯಾಗಿದೆ. ಮೀನಿನ ಬಲಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಆದರೆ ಮತ್ತೊರ್ವ ಖಳನಟ ಅನಿಲ್ ಶವ ಇನ್ನೂ ಪತ್ತೆಯಾಗಿಲ್ಲ.
 
 
ಡ್ಯಾಂನಲ್ಲಿ ಪತ್ತೆಯಾದ ಉದಯ್ ಶವವನ್ನು ಎನ್ ಡಿ ಆರ್ ಎಫ್ ಸಿಬ್ಬಂದಿಗಳು ದಡಕ್ಕೆ ತಂದಿದ್ದಾರೆ. ನಂತರ ದಡದಲ್ಲೇ ಇದ್ದ ಆ್ಯಂಬುಲೆನ್ಸ್ ನಲ್ಲಿ ಶವವಿಟ್ಟಿದ್ದಾರೆ. ಸ್ಥಳದಲ್ಲೇ ನಟ ಉದಯ್ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
 
 
ಘಟನಾ ಸ್ಥಳದ ಬಳಿ ಅಪಾರ ಜನ ನೆರೆದಿದ್ದಾರೆ. ಇದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ಮಾಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
 
ಅರೆಸ್ಟ್:
ಪ್ರಕರಣ ಹಿನ್ನೆಲೆಯಲ್ಲಿ ‘ಮಾಸ್ತಿಗುಡಿ’ ಚಿತ್ರದ ನಿರ್ದೇಶಕನನ್ನು ಅರೆಸ್ಟ್ ಮಾಡಲಾಗಿದೆ.  ನಿರ್ದೇಶಕ ನಾಗರಾಜ್ ನನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಚಿತ್ರ ನಿರ್ಮಾಪಕ ಸಂದರ್ ಗೌಡ ನನ್ನು ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here