'ಒಳ್ಳೆ ಹುಡುಗ' ಪ್ರಥಮ್ ಬಿಗ್ ಬಾಸ್

0
579

ಸಿನಿ ಪ್ರತಿನಿಧಿ ವರದಿ
ಕಳೆದ ಮೂರು ತಿಂಗಳಿಂದ ಕಲರ್ಸ್‌ ವಾಹಿನಿಯಲ್ಲಿ ನಡೆಯುತ್ತಿದ್ದ ಬಿಗ್’ಬಾಸ್ ಸೀಸನ್ 4 ಗೆ ನಿನ್ನೆ ತೆರೆ ಬಿದ್ದಿದೆ. ಎಲ್ಲರ ನಿರೀಕ್ಷೆಯಂತೆ ಬಿಗ್’ಬಾಸ್ ಸೀಸನ್ 4 ನಲ್ಲಿ ಒಳ್ಳೆ ಹುಡುಗ ಪ್ರಥಮ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕಿರಿಕ್‌ ಕೀರ್ತಿ ರನ್ನರ್‌ ಅಪ್‌ ಆಗಿದ್ದಾರೆ.
 
 
ಭಾನುವಾರ ರಾತ್ರಿ ನಡೆದ ಗ್ರಾಂಡ್‌ ಫಿನಾಲೆಯಲ್ಲಿ ನಟ ಸುದೀಪ್‌ ಅವರು, ವಿಜೇತರ ಹೆಸರು ಘೋಷಿಸಿದರು. ಪ್ರಥಮ್‌ಗೆ 50 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ ಸಿಕ್ಕಿದೆ. ಆದರೆ ಈ ಹಣವನ್ನು ಪ್ರಥಮ್‌ ಅವರು ಹುತಾತ್ಮ ಯೋಧರ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಹಾಗೂ ಅಂಗವಿಕಲ ಹೆಣ್ಣು ಮಕ್ಕಳ ವಿವಾಹ ಖರ್ಚಿಗೆ ಹಂಚುವುದಾಗಿ ಪ್ರಕಟಿಸಿದರು. ಮೊದಲ ರನ್ನರ್ ಅಪ್ ಆದ ಕೀರ್ತಿಗೆ ನಟ ಸುದೀಪ್ ತಮ್ಮ ಕಡೆಯಿಂದ ರೂ. 10 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.
 
 
 
114 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ 18 ಮಂದಿ ಭಾಗವಹಿಸಿದ್ದರು. ಪ್ರಥಮ್, ರೇಖಾ, ಕಿರಿಕ್ ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಫಿನಾಲೆಯ ಫೈನಲ್’ವರೆಗೂ ತಲುಪಿದ್ದರು.

LEAVE A REPLY

Please enter your comment!
Please enter your name here