ಒಲಿಂಪಿಕ್ಸ್‌ ಜ್ಯೋತಿಯಾತ್ರೆಯಲ್ಲಿ ಚಿರತೆ ಹತ್ಯೆ

0
665

 
ವರದಿ: ಲೇಖಾ
ಬ್ರೆಜಿಲ್‌ ನಲ್ಲಿ ನಡೆದ ಒಲಿಂಪಿಕ್ಸ್‌ ಜ್ಯೋತಿಯಾತ್ರೆ ಕಾರ್ಯಕ್ರಮದಲ್ಲಿ ಚಿರತೆಯೊಂದನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
 
 
 
ರಿಯೋ ಒಲಿಂಪಿಕ್ಸ್‌ನಲ್ಲಿ ಚಿರತೆಯೇ ಲಾಂಛನ. ಆದ್ದರಿಂದ ಕಾರ್ಯಕ್ರಮದಲ್ಲಿ ಜೀವಂತ ಚಿರತೆಯನ್ನೇ ಸರಪಳಿಯಲ್ಲಿ ಬಿಗಿದು ತಂದು ಕೂರಿಸಲಾಗಿತ್ತು. ಒಲಿಂಪಿಕ್ಸ್‌ ಜ್ಯೋತಿ ಬೆಳಗುವ ವೇಳೆ ಗಾಬರಿಗೊಂಡ ಚಿರತೆ ತಪ್ಪಿಸಿಕೊಂಡು ಅಲ್ಲೇ ಬಳಿಯಿದ್ದ ಸೈನಿಕನತ್ತ ನೆಗೆಯಿತು. ಆದ್ದರಿಂದ ಸೈನಿಕ ಚಿರತೆಯತ್ತ ಒಂದು ಗುಂಡು ಹಾರಿಸಿದ್ದಾನೆ. ಚಿರತೆ ಪ್ರಾಣ ಬಿಟ್ಟಿದೆ.
 
 
 
ಘಟನೆ ಬಳಿಕ ಕಾರ್ಯಕ್ರಮದ ಸಂಘಟಕರು ಹೇಳಿಕೆಯೊಂದನ್ನು ನೀಡಿದ್ದು, ಇನ್ನೆಂದೂ ನಮ್ಮಿಂದ ಇಂತಹ ತಪ್ಪು ಆಗುವುದಿಲ್ಲ. ನಾವು ಜೀವಂತ ಚಿರತೆಯನ್ನು ತಂದಿಟ್ಟುಕೊಳ್ಳಲು ಅನುಮತಿಯನ್ನೇ ನೀಡಬಾರದಿತ್ತು. ನಮ್ಮ ನಂಬಿಕೆ ಮತ್ತು ಮೌಲ್ಯಗಳು ಇಲ್ಲಿ ನಾಶವಾಗಿವೆ ಎಂದು ಹೇಳಿದೆ.
 
 
 
ಈ ಘಟನೆಗೆ ಪ್ರಾಣಿ ದಯಾ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಯಕ್ರಮದಲ್ಲಿ ಚಿರತೆಯನ್ನು ಇಟ್ಟುಕೊಳ್ಳಲು ನಮ್ಮ ಅನುಮತಿಯನ್ನುಪಡೆದಿರಲಿಲ್ಲ. ಚಿರತೆಯಂತಹ ಪ್ರಾಣಿಗಳನ್ನು ಅನಗತ್ಯವಾಗಿ ಹಿಂಸಿಸಲಾಗಿದೆ. ನಮ್ಮ ಶಕ್ತಿಯನ್ನು ತೋರಿಸಲು ಪ್ರಾಣಿಗಳನ್ನೇಕೆ ಸರಪಳಿಯಲ್ಲಿ ಬಿಗಿಯ ಬೇಕು ಎಂದು ಕಿಡಿಕಾರಿದೆ.

LEAVE A REPLY

Please enter your comment!
Please enter your name here