ಒಲಂಪಿಕ್ಸ್ ಸ್ಪರ್ಧಿಗಳಿಗೆ ಪ್ರಧಾನಿ ಶುಭ ಹಾರೈಕೆ

0
623

ವರದಿ: ಲೇಖಾ
ಬ್ರೆಜಿಲ್ ನಲ್ಲಿ ನಡೆಯಲಿರುವ ರಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಕ್ರೀಡಾಪಟುಗಳ ಜತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.
 
 
ದೆಹಲಿಯ ಮಾಣಿಕ್ ಷಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿನ ಜೊತೆಗೂ ಪ್ರಧಾನಿ ಮೋದಿ ಖುದ್ದು ಮಾತುಕತೆ ನಡೆಸಿದರು.
 
 
ಶೂಟರ್‌ ಗಳಾದ ಜಿತು ರೈ, ಮಾನವಜೀತ್ ಸಿಂಗ್ ಸಂಧು, ಹಿನಾ ಸಂಧು, ಬ್ಯಾಡ್ಮಿಂಟನ್ ಆಟಗಾರರಾದ ಪಿ ವಿ ಸಿಂಧು, ಕೆ ಶ್ರೀಕಾಂತ್, ಬಾಕ್ಸರ್ ಶಿವ ಥಾಪಾ, ಅಥ್ಲೀಟ್‌ ಸುಧಾ ಸಿಂಗ್‌ ಹಾಗೂ ಲಲಿತಾ ಬಾಬರ್ ಸೇರಿದಂತೆ ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾದ ಅಥ್ಲೀಟ್ ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
 
 
ಭಾರತೀಯ ಹಾಕಿ ತಂಡದ ಸದಸ್ಯರು, ಮುಖ್ಯ ಕೋಚ್ ನೀಲ್ ಹೌಗುಡ್ ಮತ್ತು ಕೋಚ್ ಸಿಆರ್ ಕುಮಾರ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಮತ್ತು ಕುಸ್ತಿ ಕೋಚ್​ಗುರುಬಕ್ಷ್ ಸಿಂಗ್ ಸಂಧು ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
 
 
ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್, ಕ್ರೀಡಾ ಕಾರ್ಯದರ್ಶಿ ರಾಜೀವ್ ಜಾದವ್, ಭಾರತೀಯ ಒಲಂಪಿಕ್ ಸಂಘದ ಅಧ್ಯಕ್ಷ ಎನ್ ರಾಮಚಂದ್ರನ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here