ಒರಿಸ್ಸಾ-ಕರ್ನಾಟಕ ಕಾರ್ಮಿಕ ಸಚಿವರ ಮಾತುಕತೆ

0
519

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದಲ್ಲಿ ವಾಸಿಸುತ್ತಿರುವ ಒರಿಸ್ಸಾ ರಾಜ್ಯದ ವಲಸೆ ಕಾರ್ಮಿಕರ ಸಮಸ್ಯೆ ಹಾಗೂ ಕಲ್ಯಾಣ ಸೌಲಭ್ಯ ವಿಸ್ತರಿಸುವ ಸಂಬಂಧ ಒರಿಸ್ಸಾ ರಾಜ್ಯದ ಕಾರ್ಮಿಕ, ಇ.ಎಸ್.ಐ. ಉಕ್ಕು ಮತ್ತು ಗಣಿ ಸಚಿವ ಪ್ರಪುಲ್ಲ ಕುಮಾರ್ ಮಲ್ಲಿಕ್ ಅವರು ರಾಜ್ಯದ ಕಾರ್ಮಿಕ ರಾಜ್ಯ ಸಚಿವ ಪಿ. ಟಿ. ಪರಮೇಶ್ವರ್ ನಾಯಕ್ ಅವರೊಂದಿಗೆ ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲಿ ಸೋಮವಾರ ಚರ್ಚೆ ನಡೆಸಿದರು.
 
 
ರಾಜ್ಯಕ್ಕೆ ಒಲಸೆ ಬಂದಿರುವ ಐದು ಲಕ್ಷಕ್ಕೂ ಹೆಚ್ಚು ಒರಿಸ್ಸಾ ಕಾರ್ಮಿಕರು ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ತಾತ್ಕಾಲಿಕ ವಸತಿ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ಸಂಬಂಧ ಉಭಯ ರಾಜ್ಯಗಳ ಕಾರ್ಮಿಕ ಸಚಿವರು ಒಡಂಬಡಿಕೆಗೆ ಪೂರ್ವವಾಗಿ ಇಂದು ಮಾತುಕತೆ ನಡೆಸಿದರು.
 
 
ಮುಂದಿನ ಜೂನ್ ತಿಂಗಳಲ್ಲಿ ರಾಜ್ಯದ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಅವರು ಒರಿಸ್ಸಾಗೆ ಭೇಟಿ ನೀಡಿ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ.
ಒರಿಸ್ಸಾದ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೆಂದು ಗುರುತಿಸಿ ಈಗಾಗಲೇ ನೊಂದಣಿ ಮಾಡಿದ್ದು ಅವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 
 
ಇಂದು ನಡೆದ ಚರ್ಚೆಯಲ್ಲಿ ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂಜೀವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಚರ್ಚೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here