'ಒಗ್ಗಟ್ಟು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ'

0
352

ಚೆನ್ನೈ ಪ್ರತಿನಿಧಿ ವರದಿ
ಪಕ್ಷದ ಒಗ್ಗಟ್ಟನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಶಿಕಲಾ ನಟರಾಜನ್ ಶಾಸಕರ ಸಭೆಯ ಬಳಿಕ ತಿಳಿಸಿದ್ದಾರೆ. ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಶಾಸಕರ ಮಹತ್ವದ ಸಭೆ ಮುಗಿದ ಬಳಿಕ ಹೊರಬಂದ ವಿ ಕೆ ಶಶಿಕಲಾ ಅವರಿ ಕಾರ್ಯಕರ್ತರತ್ತ ಕೈಬೀಸಿದ್ದಾರೆ.
 
 
ಚೆನ್ನೈನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಶಶಿಕಲಾ, ಪಕ್ಷ ವಿರೋಧಿ ಚಟುವಟಿಕೆ ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ಪನ್ನೀರ್ ಸೆಲ್ವಂ ರಾಜೀನಾಮೆ ನೀಡಲು ನಾನು ಒತ್ತಡ ಹೇರಿಲ್ಲ. ಸೆಲ್ವಂ ಅವರು ಅಮ್ಮಾ ಆಯ್ಕೆ ಮಾಡಿದ ಪ್ರತಿನಿಧಿಯಾಗಿದ್ದಾರೆ. ಪನ್ನೀರ್ ಸೆಲ್ವಂ, ಜಯಲಲಿತಾರಿಗೆ ಅವಮಾನ ಮಾಡುವ ರೀತಿ ನಡೆದುಕೊಂಡಿದ್ದಾರೆ.ನಮ್ಮ ಪಕ್ಷದ ತಳಹದಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಯಾರಿಂದಲೂ ಪಕ್ಷ ದ್ರೋಹ ಸಹಿಸಲು ಸಾಧ್ಯವಿಲ್ಲ. ಗೊಂದಲದ ಹಿಂದೆ ಡಿಎಂಕೆ ಪಕ್ಷದ ಕೈವಾಡವಿದೆ. ಪಕ್ಷದಲ್ಲಿ ಗೊಂದಲಕ್ಕ ಶಶಿಕಲಾ ಡಿಎಂಕೆ ಪಕ್ಷವನ್ನು ದೂರಿದ್ದಾರೆ.

LEAVE A REPLY

Please enter your comment!
Please enter your name here