ಒಂದೇ ದಿನ ನಲವತ್ತು ಮೊಸಳೆ ಮರಿಗಳ ಜನನ

0
450

 
ವರದಿ: ಲೇಖಾ
ಮೊಸಳೆ ಸಂರಕ್ಷಣೆ ಮತ್ತು ಸಂತಾನ ಅಭಿವೃದ್ಧಿಗೆ ವಿಶೇಷ ಯೋಜನೆ ಹಾಕಿಕೊಂಡಿದ್ದ ಇಂದೋರ್ ಮೃಗಾಲಯದಲ್ಲಿ ಈಗ ಮೊಸಳೆಗಳ ಸಂಭ್ರಮ. ಈ ಮೃಗಾಲಯದಲ್ಲಿ ಒಂದೇ ದಿನ ನಲವತ್ತು ಮೊಸಳೆ ಮರಿಗಳು ಮೊಟ್ಟೆಯೊಡೆದು ಹೊರಬಂದಿರುವುದು ವಿಶೇಷ.
 
 
ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಈ ಮರಿಗಳನ್ನು ಕಂಡು ಸಂಭ್ರಮಿಸಿದ್ದಾರೆ. ಇದೇ ಮೊದಲ ಬಾರಿಗೆ ಮೃಗಾಲಯದಲ್ಲಿ ಎರಡು ಮೊಸಳೆಗಳು ಇರಿಸಿದ ಮೊಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಸಂತಾನ ಅಭಿವೃದ್ಧಿಯಾಗಿದೆ.
 
 
 
ನವಜಾತ ಮೊಸಳೆಗಳೆಲ್ಲವೂ ಆರೋಗ್ಯ ಪೂರ್ಣವಾಗಿವೆ. ಇವುಗಳ ಆರೈಕೆಗೆ ಮೃಗಾಲಯ ಸಿಬ್ಬಂದಿ ವಿಶೇಷ ನಿಗಾ ವಹಿಸಿದೆ. ಮೊಸಳೆ ಮರಿಗಳ ಸಂರಕ್ಷಣೆಗಾಗಿ ಮೃಗಾಲಯದ ಸಿಬ್ಬಂದಿಗಳು ನೈಸರ್ಗಿಕ ವಾತಾವರಣವನ್ನು ಕಲ್ಪಿಸಿದ್ದು, ತಾಜಾ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಮೃಗಾಲಯದ ಮುಖ್ಯಸ್ಥ ಡಾ.ಉತ್ತಮ್ ಯಾದವ್ ತಿಳಿಸಿದ್ದಾರೆ.
 
 
 
ಸುದೀರ್ಘ ಸಮಯದ ಬಳಿಕ ಮೃಗಾಲಯದಲ್ಲಿ ಇಂತಹ ಒಂದು ವಿಶೇಷ ವಾತಾವರಣ ನಿರ್ಮಾಣವಾಗಿದೆ. ಹಿಂದೊಮ್ಮೆ ಮೃಗಾಲಯದಲ್ಲಿ 35 ಮೊಸಳೆಗಳ ಜನನವಾಗಿತ್ತಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here