ಒಂದು ದಿನದ ತಾಂತ್ರಿಕ ವಸ್ತುಪ್ರದರ್ಶನ

0
485

 
ಮ0ಗಳೂರು ಪ್ರತಿನಿಧಿ ವರದಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕತೆ ತ್ವರಿತಗತಿಯಲ್ಲಿ ಬದಲಾಗುತ್ತಿದ್ದು, ತಾಂತ್ರಿಕತೆಗೆ ತಕ್ಕಂತೆ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿ ಸ್ಪರ್ಧಾತ್ಮಕರಾದಲ್ಲಿ ಅತ್ತ್ಯುನ್ನತ ಉದ್ಯೋಗಗಳನ್ನು ಗಿಟ್ಟಿಸುವುದು ಸುಲಭ ಸಾಧ್ಯ ಎಂದು ಮಂಗಳೂರಿನ ಕದ್ರಿಹಿಲ್ಸ್ ನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗಿರಿಧರ್ ಸಾಲಿಯಾನ್ ತಿಳಿಸಿದರು.
 
 
ಅವರು ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕೌಶಲ್ಯ ಸಪ್ತಾಹ ಆಚರಣೆ ನಿಮಿತ್ತ ಸಂಸ್ಥೆಯಲ್ಲಿ ಏರ್ಪಡಿಸಿದ ಒಂದು ದಿನದ ತಾಂತ್ರಿಕ ವಸ್ತುಪ್ರದರ್ಶನ ಸಂದರ್ಭದಲ್ಲಿ ಮಾತನಾಡಿದರು. ತಾಂತ್ರಿಕ ಶಿಕ್ಷಣದ ಮಹತ್ವ ಹಾಗೂ ಕೌಶಲ್ಯ ಅಭಿವೃದ್ಧಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
 
 
ಪದುವಾ ಪ್ರೌಢಶಾಲೆ, ರಾಮಾಶ್ರಮ ಪ್ರೌಢಶಾಲೆ ಹಾಗೂ ಕಿರಿಯ ತಾಂತ್ರಿಕ ತರಬೇತಿ ಶಾಲೆ ಇದರ ವಿದ್ಯಾರ್ಥಿಗಳು ಬಹುಮಾನ ಗಳಿಸಿದರು. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇರುವ ತರಬೇತಿ ಸೌಲಭ್ಯಗಳು ಹಾಗೂ ವ್ಯವಸ್ಥೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
 
 
ದ.ಕ. ಜಿಲ್ಲೆಯ ಐ.ಟಿ.ಐ ಸಂಸ್ಥೆಗಳ ಶಿಕ್ಷಣಾರ್ಥಿಗಳು ಪ್ರಾಯೋಗಿಕ ತರಬೇತಿಯಲ್ಲಿ ತಯಾರಿಸಿದ ಮೊಡೆಲ್ ಹಾಗೂ ಉತ್ಪನ್ನಗಳ ವಸ್ತು ಪ್ರದರ್ಶನ ವೀಕ್ಷಿಸಿದ ಪ್ರೌಢಶಾಲಾ ವಿದ್ಯಾಥರ್ಿಗಳು ತಾಂತ್ರಿಕ ಕೌಶಲ್ಯಗಳ ಮಹತ್ವವನ್ನು ಅರಿತು ತಮ್ಮ ಸಂತೋಷ ವ್ಯಕ್ತಪಡಿಸಿದರು.
ನಿರುಪಮ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಎನ್.ಎಸ್.ಎಸ್. ಅಧಿಕಾರಿ ಆಲ್ವಿನ್ ಡಿಕುನ್ನ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here