ಒಂದು ತುತ್ತು ಬಾಯಿಗಿಡುವ ಮುನ್ನ ನೆನಪಿಸಿ…

0
1219

ಹೌದು…ನಾವು ನೀವೆಲ್ಲ ಸುಖವಾಗಿ ಒಂದೊಂದು ತುತ್ತು ಅನ್ನವನ್ನು ಬಾಯಿಗಿಡುತ್ತೇವೆ. ನಮ್ಮ ಒಂದು ತುತ್ತು ಅನ್ನ ಬಾಯಿಗೆ ಇಡುವ ಮೊದಲು ಇತರರ ಸುಖವನ್ನು ಬಯಸಬೇಕು..ಹಾಗಾದಾಗ ಮಾತ್ರ ನಮ್ಮ ಅನ್ನ ಜೀರ್ಣವಾಗಲು ಸಾಧ್ಯ. ಇತರರ ಕಣ್ಣೀರೊರೆಸುವ ಕಾರ್ಯ ನಾವು ಮಾಡಲೇ ಬೇಕು… ಇತರರ ಸುಖ ನಾವು ಬಯಸಬೇಕು..ಆವಾಗ ಮಾತ್ರ ದೇವರು ನಮ್ಮನ್ನು ಚೆನ್ನಾಗಿಡುತ್ತಾನೆ. ನಾವೆಲ್ಲ ಈ ಕುಟುಂಬದ ಕಣ್ಣೀರೊರೆಸುವ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ. 

 

ಮನಮಿಡಿಯದೆ ಇರದು… ಈ ಕಂದಮ್ಮನ ನೋಡಿ… ಸಾಮಾಜಿಕ ಜಾಲತಾಣವನ್ನು ಯಾವ್ಯಾದ್ಯಾವುದೋ ಕಾರಣಕ್ಕೆ ಉಪಯೋಗಿಸುವ ನಾವು, ಅದರಲ್ಲೇ ಕಾಲ ಕಳೆಯುವ ನಾವು ಇಂದು ಒಂದು ಉತ್ತಮ ಕೆಲಸಕ್ಕಾಗಿ ಉಪಯೋಗಿಸೋಣ. ಇದು ಯಾವುದೋ ಒಂದು ಊರಿನ ಕಥೆಯಲ್ಲ. ಐತಿಹಾಸಿಕ ನಗರಿ, ವಿದ್ಯಾಕಾಶಿ, ಜೈನಕಾಶಿ ಎಂಬ ಜಗತ್ಪ್ರಸಿದ್ದಿಯ ತಾಣ ಮೂಡುಬಿದಿರೆಯ ವ್ಯಥೆಯ ಕಥೆ. ಮೂಡುಬಿದಿರೆಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ಪುಟ್ಟ ಹಳ್ಳಿಯಲ್ಲಿ ಕುಟುಂಬವೊಂದು ನೊಂದು ಬೇಯುತ್ತಿರುವ ನೋವಿನ ಕಥೆ…

ಇದು ಮೂಡುಬಿದಿರೆ ತಾಲೂಕಿನ ಪಣಪಿಲ ಎಂಬ ಸಣ್ಣ ಹಳ್ಳಿಯ ಬಡ ಕುಟುಂಬದ ಜಗನ್ನಾಥ ಹಾಗೂ ಸಂಧ್ಯಾ ದಂಪತಿಗಳ ಲಾವಣ್ಯ ಎಂಬ ಮಗು. ಹುಟ್ಟುತ್ತಲೇ ಭೀಕರ ಚರ್ಮರೋಗಕ್ಕೆ ತುತ್ತಾಗಿರುವ ಮಗು. ದುಡಿದ ಬಹುಪಾಲು ಈ ಮಗುವಿನ ಔಷಧಿಗೆ ಮೀಸಲಾಗುತ್ತದೆ.  ಈ ಮಗುವಿಗೆ ಚಿಕಿತ್ಸೆಗೆ ಹಾಗೂ ಪೋಷಣೆಗೆ ಧನಸಹಾಯದ ಅವಶ್ಯವಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9845109108

LEAVE A REPLY

Please enter your comment!
Please enter your name here