ಐಸಿಸ್ ಬೆದರಿಕೆ

0
221

ವರದಿ:ಲೇಖಾ
ಐಸಿಸ್ ಉಗ್ರ ಸಂಘಟನೆ ಅಮೆರಿಕದ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನ ಬ್ರಿಟನ್ ನ ಹೀಥ್ರೋ ವಿಮಾನ ನಿಲ್ದಾಣಗಳ ಮೇಲೆ ಶೀಘ್ರದಲ್ಲಿಯೇ ದಾಳಿ ನಡೆಸುವುದಾಗಿ ಹೇಳಿಕೊಂಡಿದೆ.
 
 
 
ಈ ಬಗ್ಗೆ ಐಸಿಸ್ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಬೆದರಿಕೆ ಹಾಕಿದೆ. ಜುಲೈ 4 ರಂದು ಸ್ವಾತಂತ್ರ್ಯ ದಿನ ಆಚರಣೆಯ ತಯಾರಿಯಲ್ಲಿರುವ ಅಮೆರಿಕದ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಅಮೆರಿಕ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
 
 
 
ಉಗ್ರರ ಅಂತರ್ಜಾಲ ಮಾಹಿತಿ ವಿನಿಮಯದ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸಂಸ್ಥೆಯೊಂದಕ್ಕೆ ದೊರೆತ ಮಾಹಿತಿ ಮೇರೆಗೆ ಕಟ್ಟೆಚ್ಚರ ವಹಿಸುವಂತೆ ಎರಡು ದೇಶಗಳಿಗೆ ಸೂಚಿಸಿದೆ.
 
 
ಈ ನಡುವೆ ಸಂಭವನೀಯ ಉಗ್ರರ ದಾಳಿ ತಡೆಯುವಲ್ಲಿ ಜಗತ್ತಿನ ಶಕ್ತಿಗಳೆಲ್ಲ ಒಂದಾಗಬೇಕು ಎಂದು ಬ್ರಿಟನ್ ಸಾರಿಗೆ ಸಚಿವ ಲಾರ್ಡ್ ಅಹ್ಮದ್ ವಿಂಬಲ್ಡನ್ ಕರೆ ನೀಡಿದ್ದಾರೆ.
ಟರ್ಕಿ ವಿಮಾನ ನಿಲ್ದಾಣ ಹಾಗೂ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಐಸಿಸ್ ಉಗ್ರರು, ಯಾವುದೇ ಕ್ಷಣದಲ್ಲಿಯೂ ದಾಳಿ ನಡೆಸಬಹುದಾದ ಸಾಧ್ಯತೆಗಳಿರುವುದರಿಂದ ಅಮೆರಿಕ ಮತ್ತು ಬ್ರಿಟನ್ ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

LEAVE A REPLY

Please enter your comment!
Please enter your name here