ಐಸಿಸ್ ಉಗ್ರರ ಹಿಟ್ ಲಿಸ್ಟ್ ನಲ್ಲಿ ಭಾರತ

0
284

 
ವರದಿ:ಲೇಖಾ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್) ಉಗ್ರ ಸಂಘಟನೆ ಇದೀಗ ತಾನು ತಯಾರಿಸಿರುವ ಹಿಟ್ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ನೂರಾರು ಭಾರತೀಯರ ಹೆಸರಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
 
 
ಐಸಿಸ್ ತನ್ನ ಖಾಸಗಿ ಚಾನೆಲ್ ಟೆಲಿಗ್ರಾಮ್ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಹಿಟ್ ಲಿಸ್ಟ್ ನಲ್ಲಿ 4 ಸಾವಿರಕ್ಕೂ ಅಧಿಕ ಜನರ ಹೆಸರಿದ್ದು, ಅದರಲ್ಲಿ 285 ಭಾರತೀಯರು ಹಿಟ್ ಲಿಸ್ಟ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
 
 
 
ಅಮೆರಿಕ, ಬ್ರಿಟನ್ ಕೆನಡಾ, ಫ್ರಾನ್ಸ್ ಸೇರಿದಂತೆ ಜಗತ್ತಿನ 18 ದೇಶಗಳನ್ನು ಟಾರ್ಗೆಟ್ ಮಾಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು, ಗಣ್ಯರ ಹೆಸರು, ವಿಳಾಸ ಸಮೇತ ಹಿಟ್ ಲಿಸ್ಟ್ ಬಿಡುಗಡೆಗೊಳಿಸಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
 
 
ಆದರೆ ಐಸಿಸ್ ಇಂತಹ ಕೃತ್ಯಗಳನ್ನು ಎಸಗುತ್ತಿರುವುದು ಇದೆ ಮೊದಲ್ಲ, ಜನತೆಯಲ್ಲಿ ಭೀತಿ ಸೃಷ್ಟಿಸುವ ಸಲುವಾಗಿ ಈ ರೀತಿ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here